ಕಾಂಗ್ರೆಸ್ ಒಂದೆರೆಡು ಕಡೆ ಸೋಲಬಹುದು: ಆದರೆ ಮುಗಿಸಲು ಆಗಲ್ಲ  – ಸತೀಶ್ ಜಾರಕಿಹೊಳಿ.

ಬೆಳಗಾವಿ,ಮಾರ್ಚ್,11,2022(www.justkannada.in): ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಟೀಕೆ ವ್ಯಕ್ತಪಡಿಸಿ ವ್ಯಂಗ್ಯವಾಡುತ್ತಿರುವ ರಾಜ್ಯ ಆಡಳಿತರೂಢ ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕರ್ನಾಟಕದಲ್ಲಿ ನಾವು ಗಟ್ಟಿಯಾಗಿದ್ದೇನೆ ನಮ್ಮದೆ ಆದ ವೋಟ್ ಬ್ಯಾಂಕ್ ಇದೆ. ಕಾಂಗ್ರೆಸ್ ಒಂದೆರೆಡು ಕಡೆ ಸೋಲಬಹುದು: ಆದರೆ ಮುಗಿಸಲು ಆಗಲ್ಲ. ಬೇರೆ ರಾಜ್ಯಕ್ಕೂ ಕರ್ನಾಟಕಕ್ಕೂ ಹೋಲಿಸಲು ಆಗಲ್ಲ.  ಬಿಜೆಪಿ 70 ರಿಂದ 80 ಸ್ಥಾನ ಗೆಲ್ಲಬಹುದು.  ಬಿಜೆಪಿ  ಕಟ್ಟಲು 100 ವರ್ಷ ತೆಗೆದುಕೊಂಡರು ಮುಂದೆ ನಾವು ಮತ್ತೆ ಮೇಲೆರುತ್ತೇವೆ ಎಂದು ಹೇಳಿದರು.Belagavi Lok Sabha Byelections: Satish Jarkiholi's candidature opposed

ಈ ಚುನಾವಣೆಯಲ್ಲಿ ಸೋತಿದ್ದು ನಮಗೆ ಪಾಠ. ಚುನಾವಣೆಯಲ್ಲಿ ಸೋಲಿಗೆ ಸ್ಥಳೀಯ ಸಮಸ್ಯೆಗಳು ಕಾರಣ. ಮತಗಳು ವಿಭಜನೆಯಾಗಿದ್ದರಿಂದ ಹೊಡೆದ ಬಿದ್ದಿದೆ. ಕಾಂಗ್ರೆಸ್ ನಲ್ಲಿ ಭಿನ್ನಮತ ಇರಬಹುದು ಆದರೆ ಮುಂದಿನ ಚುನಾವಣೆಗೆ ತೊಂದರೆಯಾಗಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: Congress –lose-election-  Sathish jarkiholi