ಹೆಚ್.ಡಿಕೆ ಮತ್ತು ಬಿಎಸ್ ವೈ ಸಿಎಂ ಆಗಲ್ಲ ಅಂದಿದ್ರು; ಆದ್ರೆ ಮುಖ್ಯಮಂತ್ರಿ ಆಗೇ ಬಿಟ್ರು- ಸಿದ್ಧರಾಮಯ್ಯಗೆ ಸಿಎಂ ಬೊಮ್ಮಾಯಿ ಚಾಟಿ.

ಬೆಂಗಳೂರು,ಮಾರ್ಚ್,11,2022(www.justkannada.in): ಕಳೆದ ಬಾರಿ ಚುನಾವಣೆಯಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ  ಮುಖ್ಯಮಂತ್ರಿ ಆಗಲ್ಲ ಎಂದಿದ್ದರು. ಆದರೆ ಇಬ್ಬರೂ ಮುಖ್ಯಮಂತ್ರಿಗಳಾದರು. ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರೂ ಅವರು ಅಧಿಕಾರಕ್ಕೆ ಬರಲಿಲ್ಲ ಎಂದು ಸಿದ‍್ಧರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಟಿ ಬೀಸಿದರು.

ಪಂಚರಾಜ್ಯ ಚುನಾವಣಾ ಫಲಿತಾಂಶ ಮತ್ತು ರಾಜ್ಯದ ಮುಂದಿನ ಚುನಾವಣೆ ಕುರಿತು ಇಂದು ವಿಧಾನಸಭೆಯಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಬಿ ಎಸ್ ಯಡಿಯೂರಪ್ಪ ನಡುವೆ ಟಾಕ್ ವಾರ್ ನಡೆಯಿತು.

ಈ ವೇಳೆ  ಪ್ರತಿಕ್ರಿಯಿಸಿದ  ಸಿಎಂ ಬಸವರಾಜ  ಬಸವರಾಜ ಬೊಮ್ಮಾಯಿ, ಸತ್ಯ, ವಾಸ್ತವಾಂಶ ಗೊತ್ತಿದ್ದರೂ ಕೂಡ ಅದರ ತದ್ವಿರುದ್ಧವಾಗಿ ಜೋರಾಗಿ ಹೇಳಿದರೆ ಜನರು ನಂಬುತ್ತಾರೆ ಎಂದು ಸಿದ್ದರಾಮಯ್ಯನವರು ಭಾವಿಸಿದಂತಿದೆ. ”Loud voice need not be truth” ಎಂಬ ಮಾತಿನಂತಾಗಿದೆ ಸಿದ್ದರಾಮಯ್ಯನವರ ಪರಿಸ್ಥಿತಿ ಎಂದು ವ್ಯಂಗ್ಯವಾಡಿದರು.

ಇಂದಿನ ವಸ್ತುಸ್ಥಿತಿ 5 ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಬರುತ್ತಿಲ್ಲ, ಆಡಳಿತ ವಿರೋಧಿ ಅಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದು ರಾಜಕೀಯದಲ್ಲಿ ನಿರ್ಧಾರದ ವಿಷಯವಾಗುತ್ತಿದೆ. ಬಿಜೆಪಿ ಮಾತ್ರ ಇತ್ತೀಚಿನ ದಿನಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಪಕ್ಷವಾಗಿದೆ  ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: HDK-BSY- CM- Bommai- Siddaramaiah.