ಮರಕ್ಕೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ದುರ್ಮರಣ.

ಕಲಬುರುಗಿ,ಮಾರ್ಚ್,11,2022(www.justkannada.in): ಮರಕ್ಕೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ  ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.

ಕಲ್ಬುರ್ಗಿ ಜಿಲ್ಲೆ ಅಫಜಲಪುರದ ಹೊರವಲಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಚಾಲಕ ನಾಲ್ವರು ಮಹಿಳೆಯರು ಸಾವನ್ನಪ್ಪಿದರೇ ಮೂವರಿಗೆ ಗಂಭೀರ ಗಾಯಗಳಾಗಿದೆ. ಗಾಣಗಾಪುರದ ದತ್ತಾತ್ರಯ ದೇಗುಲದಿಂದ ವಾಪಸ್ ಆಗುವ ವೇಳೆ ಈ ಅಪಘಾತ ಸಂಭವಿಸಿದೆ. ಮೃತರು ಅಫಜಲಪುರದಿಂದ ಮಹಾರಾಷ್ಟ್ರದ ಕಡೆ ಹೊರಟಿದ್ದರು ಎನ್ನಲಾಗಿದೆ.tractor-collision-bike-bike-rider-dies-on-the-spot-mysore

ಸ್ಥಳಕ್ಕೆ ಅಫಜಲಪುರ ಠಾಣಾ ಪೊಲೀಸರು ಭೇಟಿ ನೀಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words: accident-death-five