Wednesday, October 7, 2026

BDA Apartments

Selfless service BDA JK_Adv BDA Adv
Home Front Page ಕಾಂಗ್ರೆಸ್ ನಾಯಕತ್ವ ಕುಸಿಯಲ್ಲ: 2028ಕ್ಕೆ ಮತ್ತೆ ಅಧಿಕಾರಕ್ಕೆ ಬರುತ್ತೆ-ಡಿಸಿಎಂ ಡಿಕೆ ಶಿವಕುಮಾರ್

ಕಾಂಗ್ರೆಸ್ ನಾಯಕತ್ವ ಕುಸಿಯಲ್ಲ: 2028ಕ್ಕೆ ಮತ್ತೆ ಅಧಿಕಾರಕ್ಕೆ ಬರುತ್ತೆ-ಡಿಸಿಎಂ ಡಿಕೆ ಶಿವಕುಮಾರ್

ರಾಮನಗರ,ಆಗಸ್ಟ್,3,2024 (www.justkannada.in): ಏನೇ ಆದರೂ ಕಾಂಗ್ರೆಸ್ ನಾಯಕತ್ವ ಕುಸಿಯಲ್ಲ. ಕಾಂಗ್ರೆಸ್ ಶಕ್ತಿ ಯಾವಾಗಲೂ ಇದ್ದೇ ಇರುತ್ತದೆ.  2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ರಾಮನಗರದಲ್ಲಿ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಪಿತೂರಿ ಆಯತು ಏನೇ ಆದರೂ ಕಾಂಗ್ರೆಸ್ ನಾಯಕತ್ವ ಕುಸಿಯಲ್ಲ.  ನವೆಂಬರ್ ಡಿಸೆಂಬರ್​ಗೆ ಸರ್ಕಾರ ಪಲ್ಟಿ ಮಾಡುತ್ತೇವೆ ಅಂತಾರೆ. ಅದೇನು ಪಲ್ಟಿ ಹೊಡೆಯೋಕೆ ಮಡಕೆನಾ ಎಂದು ಟಾಂಗ್ ನೀಡಿದರು.

ಕಾವೇರಿ ನೀರು  ಮೇಕೆದಾಟಿಗೆ ಹೆಚ್.ಡಿ ಕುಮಾರಸ್ವಾಮಿ ಹೆಜ್ಜೆ ಹಾಕಲಿಲ್ಲ ಬಿಜೆಪಿ ಜೊತೆ ಈಗ ಹೆಜ್ಜೆ ಹಾಕುತ್ತಿದ್ದಾರೆ. ನಿನ್ನೆ ಬಿಜೆಪಿ ಬಾವುಟ ಮಾತ್ರ ಇತ್ತು.  ಈಗ ಜೆಡಿಎಸ್ ಬಾವುಟ ಬಂದಿದೆ. ಪಾದಯಾತ್ರೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಪಾಂಡವಪುರ ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ನಿನ್ನೆ ಜೆಡಿಎಸ್ ಬಾವುಟವೇ ಇರಲಿಲ್ಲ. ನಾವು ನಿನ್ನೆ ಮಾತಾಡಿದ್ದಕ್ಕೆ ಜೆಡಿಎಸ್ ಬಾವುಟ ಹಾಕಿದ್ದಾರೆ ಎಂದು ಲೇವಡಿ ಮಾಡಿದರು.

ಸಿಡಿ ತೋರಿಸ್ತಿದ್ದರೆಂದು ಹೆಚ್.ಡಿ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ತಿರುಗೇಟು ಕೊಟ್ಟ ಡಿಕೆ ಶಿವಕುಮಾರ್, ನಾನು ಸಿನಿಮಾ ನಿರ್ದೇಶಕನಲ್ಲ ನಿರ್ಮಾಪಕ ಅಲ್ಲ ನಾನೂ ಟೂರಿಂಗ್ ಟಾಕೀಸ್ ಇಟ್ಟಿಕೊಂಡಿದ್ದೆ ನನ್ನ ಇತಿಹಾಸದ ಬಗ್ಗೆ ಹೇಳಲಿ. ಸೆಂಟ್ರಲ್ ಗವರ್ನಮೆಂಟ್ ನಿಂದ ತನಿಖೆ ಮಾಡಿಸಲಿ.  ಸದ್ಯಕ್ಕೆ ನಿನ್ನ ಸಹೋದರನ್ನದ್ದು ಕೊಡಪ್ಪ.  ಮಿಲ್ಟ್ರಿ ಕರೆದುಕೊಂಡು ಹೋಗುತ್ತಂತೆ ನಾನು ರೆಡಿ ಇದ್ದೇನೆ.   ಬಿಎಸ್ ಯಡಿಯೂರಪ್ಪ ಯಾಕೆ ರಾಜೀನಾಮೆ ಕೊಟ್ಟರು ಎಂದು ವಿಜಯೇಂದ್ರ ಹೇಳಲಿ ಎಂದು ಗುಡುಗಿದರು.

Key words: Congress, leadership, not fallen, DCM DK Shivakumar