ಇಸ್ರೋಗೆ ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ:  ನಮ್ಮ ಪಕ್ಷಕ್ಕೆ ವೈಜ್ಞಾನಿಕ ನೆಲಗಟ್ಟಿನಲ್ಲಿ ಅಚಲ ನಂಬಿಕೆ- ಬಿ.ಕೆ ಹರಿಪ್ರಸಾದ್.

ಕಲ್ಬುರ್ಗಿ,ಸೆಪ್ಟಂಬರ್,2,2023(www.justkannada.in):  ಚಂದ್ರಯಾನ-3 ಬಳಿಕ ಇದೀಗ ಇಂದು ಸೂರ್ಯಯಾನ ಆದಿತ್ಯ ಎಲ್-1 ಉಡಾವಣೆ ಮಾಡುವ ಮೂಲಕ ಇಸ್ರೋ ಮತ್ತೊಂದು ಇತಿಹಾಸ ಸೃಷ್ಟಿಸುತ್ತಿದೆ.  ಈ ಮಧ್ಯೆ ಇಸ್ರೋಗೆ  ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್,  ಕಾಂಗ್ರೆಸ್ ವೈಜ್ಞಾನಿಕ ನೆಲಗಟ್ಟಿನಲ್ಲಿ ಅಚಲ ನಂಬಿಕೆ ಇಟ್ಟುಕೊಂಡಿದೆ. ನಾವು ಬಿಜೆಪಿಯವರ ರೀತಿ ಮೂಢನಂಬಿಕೆ ಹೊಂದಿಲ್ಲ. ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಗೆ ಜಾಗ ನೀಡಿದ್ದು ಕಾಂಗ್ರೆಸ್ ಸರ್ಕಾರ. ಚಂದ್ರಯಾನದ ಬಹುತೇಕ ವಿಜ್ಞಾನಿಗಳು ಹಿಂದುಳಿದ ವರ್ಗದವರು.

ಅಧಿಕಾರ ಬಂದಾಗ ಕೆಲವೇ ಸಮುದಾಯ ಅಧಿಕಾರ ಅನುಭವಿಸುತ್ತಿದೆ. ಎಲ್ಲಾ ವರ್ಗದವರಿಗೂ ಅಧಿಕಾರ ಸಿಗುವಂತಾಗಲಿ ಎಂದು ಎಂಎಲ್​ಸಿ ಬಿ.ಕೆ.ಹರಿಪ್ರಸಾದ್​ ಹೇಳಿದರು.

Key words: Congress government – space – ISRO- BK Hariprasad.