ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಬೆಂಬಲ ಘೋಷಣೆ

ನವದೆಹಲಿ, ನವೆಂಬರ್ 09,2019 (www.justkannada.in): ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ.

ಸುಪ್ರೀಂ ನೀಡಿರುವ ತೀರ್ಪು ಯಾವುದೇ ಒಂದು ಗುಂಪಿನ ಪರವಾಗಿ ಬಂದಿರುವ ತೀರ್ಪಲ್ಲ. ಇದು ಸರ್ವ ಧರ್ಮಕ್ಕೂ ಸಂದ ಗೆಲುವಾಗಿದೆ. ಇಂತಹ ತೀರ್ಪನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ.

ರಾಮ ಧರ್ಮ ಸಹಿಷ್ಣುತೆಗೆ ಹೆಸರು ವಾಸಿಯಾಗಿದ್ದನು. ವಚನ ಪಾಲನೆ ಹಾಗೂ ತ್ಯಾಗಕ್ಕೂ ಹೆಸರುವಾಸಿ. ಇಂತಹ ರಾಮನ ಮಂದಿರದ ಬಗ್ಗೆ ಉಂಟಾಗಿದ್ದ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.