ಸುಪ್ರೀಂ ಕೋರ್ಟ್ ಪ್ರಕಟಿಸಿದ ಅಯೋಧ್ಯೆ ತೀರ್ಪಿನ ಹೈಲೈಟ್ಸ್

ಸುಪ್ರೀಂ ಕೋರ್ಟ್ ಪ್ರಕಟಿಸಿದ ಅಯೋಧ್ಯೆ ತೀರ್ಪಿನ ಹೈಲೈಟ್ಸ್ ಇಲ್ಲಿದೆ ನೋಡಿ…

೧) ಶಿಯಾ ವಕ್ಫ್ ಬೊರ್ಡ್ ಅರ್ಜಿ ವಜಾ

೨) ನಿರ್ಮೊಹಿ ಅಖಾಡದ ಅರ್ಜಿಗೆ ಕೆಲವು ಮಿತಿಗಳಿವೆ, ಯಾವತ್ತು ನಿರ್ಮೊಹಿ ಅಖಾಡದ ಜಮೀನನ ಹಕ್ಕಿಗಾಗಿ ಅರ್ಜಿ ಸಲ್ಲಿಸಿಲ್ಲ ಅದ್ದರಿಂದ ಅದರ ಅರ್ಜಿ ವಜಾ,

೩) ರಾಮಲಲ್ಲಾ ಅರ್ಜಿ ಮಾನ್ಯ

೪) ಕಂದಾಯ ಇಲಾಖೆ ಪ್ರಕಾರ ವಿವಾದಿತ ಜಮೀನು ಸರ್ಕಾರಿ ಜಮೀನು

೫) ಉತ್ಖನನದ ಕೆಳಗೆ ಸಿಕ್ಕ ಕಲಾಕೃತಿಗಳು ಇಸ್ಲಾಂ ಕಲಾಕೃತಿಗಳಲ್ಲ,

೬) ರಾಮ ಅಯೋದ್ಯೆಯಲ್ಲಿ ಹುಟ್ಟಿದ್ದ ಎಂಬುದನ್ನು ಎಲ್ಲರೂ ನಂಬುತ್ತಾರೆ.

೭) ಹಿಂದೂ ದೇವಾಲಯ ನಾಶ ಮಾಡಿ ಕಟ್ಟಿದ್ದಾರೆ ಎಂಬುದಕ್ಕೂ ಸಾಕ್ಷ್ಯವಿಲ್ಲ

೮) ನಂಬಿಕ ನೈಜ್ಯವಾಗಿದ್ದಾಗ ಕೊರ್ಟ್ ಮಧ್ಯಪ್ರವೇಶ ಮಾಡಲ್ಲ.

೯) ರಾಮನ ಮೇಲೆ ಹಿಂದುಗಳ ನಂಬಿಕೆ ಪ್ರಶ್ನಾತೀತ

೧೦) ನಂಬಿಕೆಯ ಅಧಾರದಲ್ಲಿ ಭೂಮಿ ಮಾಲಿಕತ್ವ ನಿರ್ಧರಿಸುವುದು ಕಷ್ಟ

೧೧) ಹಿಂದೆ ಕಟ್ಟಡ ಇತ್ತು ಎಂಬ ಕಾರಣಕ್ಕೆ ಈಗ ಹಕ್ಕು ಚಲಾವಣೆ ಸಾಧ್ಯವಿಲ್ಲ

೧೨) ಈ ಕಟ್ಟಡದ ಒಳಾಗಂಣದಲ್ಲಿ ಪೂಜೆ ಹಾಗೂ ನಮಾಜ್ ಮಾಡಿದ್ದಕ್ಕೆ ಸಾಕ್ಷಿ ಇದೆ

೧೩) ವಿವಾದಿತ ಸ್ಥಳದಲ್ಲಿ ಹಿಂದು ಮುಸ್ಲಿಂ ಇಬ್ಬರು ಪ್ರಾರ್ಥನೆ ಮಾಡಿದ್ದಾರೆ

೧೪)1856 ರಲ್ಲಿ ನಮಾಜ್ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಇಲ್ಲ

೧೫) ಯಾತ್ರಿಗಳು ಪುರಾತತ್ವ ಇಲಾಖೆ ರಾಮಮಂದಿರದ ಪರವಾಗಿದೆ.

೧೬) ವಿವಾದಿತ ಜಾಗ ಸಂಪೂರ್ಣ ಮುಸ್ಲಿಂಮರ ವಶದಲ್ಲಿ ಇರಲಿಲ್ಲ

೧೭) ಮಸೀದಿ ಒಳಗಡೆ ಪೂಜೆ ನಿರ್ಬಂಧಿಸಿದಾಗ ಹಿಂದುಗಳು ಹೊರಗಡೆ ಪೂಜೆ ಮಾಡ್ತಾ ಇದ್ದರು

೧೮) ಮಸೀದಿಗೆ ಹಾನಿ ಮಾಡಿದ್ದು ಕಾನೂನು ಉಲ್ಲಂಘನೆ ಹಾಗೂ ಪ್ರಾಥನಾ ಹಕ್ಕಿನ ಉಲ್ಲಂಘನೆ

೧೯) ಸಂಪೂರ್ಣ ಭೂಮಿ ನಮ್ಮದು ಎಂಬುದಕ್ಕೆ ಸುನ್ನಿಬೋರ್ಡ್ ದಾಖಲೆಗಳನ್ನು ಕೊಟ್ಟಿಲ್ಲ

೨೦) ನಿರ್ಮೊಹಿ ಅಖಾಡ ಹಾಗೂ ಸುನ್ನಿ ವಕ್ಫ್ ಬೋರ್ಡ್ ವಾದಗಳು ಮಿತಿಯಲ್ಲಿವೆ

೨೧) ಅಲಹಾಬಾದ್ ಕೊರ್ಟ್ ತೀರ್ಪು ಒಪ್ಪುವಂತಹುದಲ್ಲ

೨೨) ಮುಸ್ಲಿಂಮರಿಗೆ ಪರ್ಯಾಯ ಭೂಮಿ ಕೊಡಬೇಕು ಎಂದ ಕೊರ್ಟ್

೨೩ ) ರಾಮಮಂದಿರ ನಿರ್ಮಾಣದ ಹೊಣೆ ಕೇಂದ್ರ ಸರ್ಕಾರಕ್ಕೆ

೨೪) ಷರತ್ತುಬದ್ದವಾಗಿ ರಾಮಲಲ್ಲಾ ಪರ ತೀರ್ಪು