Wednesday, August 12, 2026

BDA Apartments

Home Front Page ಬೆಟ್ಟಿಂಗ್ ಹೆಸರಲ್ಲಿ ಮೋಸ: ‘ಕೈ’ ಅಭ್ಯರ್ಥಿ ಸೋತಿದ್ರೂ ಗೆದ್ದಿದಾರೆಂದು ಹೇಳಿ ವ್ಯಕ್ತಿಗೆ ‘ಕೈ’ ಕಾರ್ಯಕರ್ತರು ಹೀಗಾ...

ಬೆಟ್ಟಿಂಗ್ ಹೆಸರಲ್ಲಿ ಮೋಸ: ‘ಕೈ’ ಅಭ್ಯರ್ಥಿ ಸೋತಿದ್ರೂ ಗೆದ್ದಿದಾರೆಂದು ಹೇಳಿ ವ್ಯಕ್ತಿಗೆ ‘ಕೈ’ ಕಾರ್ಯಕರ್ತರು ಹೀಗಾ ವಂಚನೆ ಮಾಡೋದು…..

ಮೈಸೂರು,ಮೇ,27,2019(www.justkannada.in): ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆಂದು ಹಣ, ಒಡವೆ ಜಮೀನು ಹೀಗೆ ನಾನಾ ರೀತಿಯಲ್ಲಿ ಬೆಟ್ಟಿಂಗ್ ಕಟ್ಟಿದ್ದನ್ನ ನಾವು ನೋಡಿದ್ದೇವೆ. ಅದೇ ರೀತಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಬಿಜೆಪಿ ಅಭಿಮಾನಿಯೊಬ್ಬ ಬೆಟ್ಟಿಂಗ್ ಕಟ್ಟಿ ಮೋಸಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ನಿವಾಸಿ ಚಿಕ್ಕನಾಯಕ ಎಂಬಾತನೇ ಮೋಸಹೋಗಿರುವ ವ್ಯಕ್ತಿ. ಈತ ಬಿಜೆಪಿ ಕಟ್ಟಾ ಅಭಿಮಾನಿಯಾಗಿದ್ದು, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗೆಲ್ತಾರೆಂದು  ಕಾಂಗ್ರೆಸ್ ಕಾರ್ಯಕರ್ತರ ಬಳಿ ಬೆಟ್ಟಿಂಗ್ ಕಟ್ಟಿದ್ದಾರೆ.

ಆದರೆ ಕಾಂಗ್ರೆಸ್ ಕಾರ್ಯಕರ್ತರು  ಆತುರದ ನಿರ್ಧಾರದಿಂದ ಯಡವಟ್ಟು ಮಾಡಿ ಬೆಟ್ಟಿಂಗ್‌ ಹೆಸರಿನಲ್ಲಿ ವ್ಯಕ್ತಿಗೆ ವಂಚಿಸಿದ್ದಾರೆ. ಅಂದು ಫಲಿತಾಂಶದ ದಿನ 4 ಗಂಟೆಯಲ್ಲೇ ಧ್ರುವನಾರಾಯಣ್ ಗೆದ್ದಾಯ್ತು ಎಂದು ಸುಳ್ಳು ಮಾಹಿತಿ ನೀಡಿ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕನಾಯಕನಿಗೆ ಬುಂಡೆ ಹೊಡೆಸಿ ಊರೆಲ್ಲ ರೌಂಡ್ ಹೊಡೆಸಿದ್ದಾರೆ.

ಈ ವೇಳೆ ಸೋತನೆಂದು ತಿಳಿದು ಚಿಕ್ಕನಾಯಕ ಬುಂಡೆ ಹೊಡೆಸಿದ್ದು, ಬಳಿಕ ತಾನೇ ಗೆದ್ದಿರುವುದಾಗಿ ಗೊತ್ತಾಗಿ ಪೇಚಾಟಕ್ಕೆ ಸಿಲುಕಿದ್ದಾರೆ. ಬಳಿಕ ಬುಂಡೆ ಹೊಡೆಸಿದವ್ರ ವಿರುದ್ಧ ಗರಂ ಆದ ಜಡೇ ಚಿಕ್ಕನಾಯಕ ಬುಂಡೆ ಹೊಡೆಸಿದವ್ರ ಮನೆ ಮನೆ ಸುತ್ತಾಡಿ ಆಕ್ರೋಶ ಹೊರ ಹಾಕಿದ್ದಾರೆ. ಇದೀಗಾ ಗೆದ್ದರು ಬುಂಡೆ ಹೊಡೆಸಿ ಪೇಚಿಗೆ ಸಿಲುಕಿದ ಚಿಕ್ಕನಾಯಕ ಬುಂಡೆ ಹೊಡೆಸಿದವ್ರನ್ನ ಹುಡುಕುತ್ತ ತಿರುಗುತ್ತಿದ್ದಾರೆ. ಚಿಕ್ಕನಾಯಕನ ಕೈಗೆ ಸಿಗದೆ ಕೈ ಕಾರ್ಯಕರ್ತರು ಪರಾರಿಯಾಗಿದ್ದಾರೆ

ಕಳೆದೆರಡು ಬಾರಿಯು ಇದೇ ರೀತಿ ಚಿಕ್ಕನಾಯಕ ಬಾಜಿ ಚಾಲೆಂಜ್ ಮಾಡಿದ್ದ. ಅಂದು ಇದೇ ರೀತಿ ಸೋತು ಬುಂಡೆ ಹೊಡೆಸಿದ್ದ ಎನ್ನಲಾಗಿದೆ.

Key words: Congress activists cheat on betting.

#mysore #Congressactivists #cheat   #betting #bjp