ಮೈಸೂರಿನಲ್ಲಿ ನಾಳೆ ಮಹಿಷಾ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ.

ಮೈಸೂರು,ಅಕ್ಟೋಬರ್,12,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಮೂರು ದಿನಗಳು ಬಾಕಿ ಇದ್ದು ಇದಕ್ಕೂ ಮುನ್ನ ಮಹಿಷಾ ದಸರಾ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಇದೀಗ ನಾಳೆ ಮಹಿಷಾ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಗರದ ಟೌನ್ ಹಾಲ್ ನಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ನೀಡಲಾಗಿದ್ದು ವೇದಿಕೆ ಕಾರ್ಯಕ್ರಮಕ್ಕಷ್ಟೇ ಅನುಮತಿ  ನೀಡಲಾಗಿದ್ದು ಸಂಭ್ರಮಾಚರಣೆಗೆ ಅವಕಾಶವಿಲ್ಲ. ಮೆರವಣಿಗೆ ರ್ಯಾಲಿ ಪ್ರತಿಭಟನೆ ಮಾಡಬಾರದು. ನೇರವಾಗಿ ಸಭಾ ಕಾರ್ಯಕ್ರಮ ಆರಂಭಿಸಬೇಕು ಪ್ರಚೋದನೆ ನೀಡುವ ಭಾಷಣ ಮಾಡಬಾರದು ಎಂದು ಷರತ್ತುಗಳೊಂದಿಗೆ ಅನುಮತಿ ನೀಡಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ.

ಟೌನ್ ಹಾಲ್ ಹೊರತುಪಡಿಸಿ ಮೈಸೂರಿನಲ್ಲ  ಇಂದು ಮಧ್ಯರಾತ್ರಿಯಿಂದ ಅಕ್ಟೋಬರ್ 14ರ ಬೆಳಿಗ್ಗೆ 6ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಯಾವುದೇ ಮೆರವಣಿಗೆ ಪ್ರತಿಭಟನೆ ಮಾಡುವಂತಿಲ್ಲ. ಮದುವೆ ಶಾಲಾಕಾಲೇಜಿಗೆ ತೆರಳುವವರಿಗೆ ಅನ್ವಯವಿಲ್ಲ ಎಂದು ತಿಳಿಸಿದ್ದಾರೆ.

Key words: Conditional- permission – celebrate- Mahisha Dasara -tomorrow – Mysore.