ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ರಾಜ್ ಕುಮಾರ್ ಬಾಹುಸಾರ್, ಛಾಯಾಗ್ರಾಹಕ ಲಕ್ಷ್ಮೀನಾರಾಯಣ ಯಾದವ್ ಭಾಜನ.

ಮೈಸೂರು,ಅಕ್ಟೋಬರ್,12,2023(www.justkannada.in):  ಮೈಸೂರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಹಿರಿಯ ಪತ್ರಕರ್ತ ದಿ.ನಿರಂಜನ್ ನಿಕ್ಕಂ ಹಾಗೂ ಹಿರಿಯ ಛಾಯಾಗ್ರಾಹಕ ದಿ.ನೇತ್ರರಾಜು ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ದತ್ತಿನಿಧಿ ಪ್ರಶಸ್ತಿಗಳಿಗೆ ಕ್ರಮವಾಗಿ ಪತ್ರಕರ್ತ ರಾಜ್ ಕುಮಾರ್ ಬಾಹುಸಾರ್ ಹಾಗೂ ಛಾಯಾಗ್ರಾಹಕ ಎಂ.ಎನ್.ಲಕ್ಷ್ಮೀನಾರಾಯಣ ಯಾದವ್ ಅವರು ಆಯ್ಕೆಯಾಗಿದ್ದಾರೆ.

ಈ ಹಿಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ. ಸೋಮಶೇಖರ್ ಅವರು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಸದರಿ ಸಾಲಿನಲ್ಲಿ ನಿಧನ ಹೊಂದಿದ್ದ ಪತ್ರಕರ್ತರ ಕುಟುಂಬದವರಿಗೆ ತಲಾ 50ಸಾವಿರ ರೂ. ನೆರವು ನೀಡಿದ್ದರು.

ಮೇಲಿನ ಇಬ್ಬರು ಪತ್ರಕರ್ತರ ಕುಟುಂಬದವರ ಸಲಹೆ ಮೇರೆಗೆ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಪ್ರತಿ ವರ್ಷ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ನೀಡಲು ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಸಂಘವು ಪ್ರಸಕ್ತ ಸಾಲಿನ ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ರಾಜ್ ಕುಮಾರ್ ಬಾಹುಸಾರ್, ಛಾಯಾಗ್ರಾಹಕ ಲಕ್ಷ್ಮೀನಾರಾಯಣ ಯಾದವ್ ಇಬ್ಬರು ಪತ್ರಕರ್ತರನ್ನು ಆಯ್ಕೆ ಮಾಡಿದ್ದು ಅಕ್ಟೋಬರ್ ಕೊನೆಯ ವಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ತಿಳಿಸಿದ್ದಾರೆ.

Key words: Journalist Raj Kumar Bahusar-Photographer- Laxminarayan Yadav Bhajan  Endowment Award.