ಕಾಂಗ್ರೆಸ್ ನ ಉಚಿತ ವಿದ್ಯುತ್ ಘೋಷಣೆ ಬಗ್ಗೆ  ಸಚಿವ ಗೋವಿಂದ ಕಾರಜೋಳ ಟೀಕೆ.

ಬೆಂಗಳೂರು,ಜನವರಿ,12,2023(www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಡಿ.ಕೆ ಶಿವಕುಮಾರ್ ಮಾಡಿದ್ಧ ಘೋಷಣೆ ಬಗ್ಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟೀಕಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಗೋವಿಂದ ಕಾರಜೋಳ,  60 ವರ್ಷ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಏನು ಮಾಡಲಿಲ್ಲ. ಈಗ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ. ಬರಿ ಸುಳ್ಳು ಭರವಸೆ ಘೋಷಣೆ ಮಾಡಿದ್ದಾರೆ. 200 ಯುನಿಟ್ ವಿದ್ಯುತ್  ಎಲ್ಲಿಂದ ತರ್ತಾರೆ…? ಉಚಿತ ವಿದ್ಯುತ್ ಘೋಷಣೆ ಮೋಸಗಾರಿಕೆ ತಂತ್ರ ಎಂದು ಕಿಡಿಕಾರಿದರು.

ನಾವು 75 ಯುನಿಟ್ ವಿದ್ಯುತ್  ಉಚಿತವಾಗಿ ಕೊಡುತ್ತಿದ್ದೇವೆ 75 ಯುನಿಟ್ ವಿದ್ಯುತ್ ಅನುಷ್ಟಾನಕ್ಕೆ ತಂದಿದ್ದೇವೆ. ಸ್ವಾತಂತ್ರ ಬಂದ ಮೇಲೆ ದಲಿತರಿಗೆ ಮೋಸ ಮಾಡಿದ್ದೇ ಕಾಂಗ್ರೆಸ್. ಗರೀಬಿ ಹಠಾವೋ ಅಂದರು. ಬಡತನ ನಿವಾರಣೆ ಆಯಿತಾ. ಈಗಗಲೇ ಕೇಂದ್ರ, ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ಕೊಡಿತ್ತಿದೆ ಇವರೇನು ಕೊಡೊದು ಮತ್ತೆ ಎಂದು ವಾಗ್ದಾಳಿ ನಡೆಸಿದರು.

Key words:  Minister- Govinda Karajola- Congress-announcement – free -electricity.