ಅಮಿತ್ ಶಾಗೆ ಅಧಿಕಾರದಲ್ಲಿರಲು ನೈತಿಕ ಹಕ್ಕು ಇಲ್ಲ: ಟಿಪ್ಪು ಜಯಂತಿ ಆಚರಣೆ ಮಾಡಿದ್ರೆ ಎಲ್ಲಿಯೂ ಗಲಾಟೆ ಆಗಲ್ಲ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ…

ಮೈಸೂರು,ನ,8,2019(www.justkannada.in): ಅಪರೇಷನ್ ಕಮಲ ಮಾಡಿ ಅನೈತಿಕವಾಗಿ ಅಧಿಕಾರಿಕ್ಕೆ ಬಂದಿದ್ಧಾರೆ. ಅಮಿತ್ ಶಾ ಮತ್ತು ಬಿ.ಎಸ್ ಯಡಿಯೂರಪ್ಪ ಇಬ್ಬರನ್ನೂ ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ದೂರು ನೀಡ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಷ್ಟ್ರಪತಿಗಳ ಸಮಯ ಕೇಳಿದ್ದೇವೆ ಕೊಟ್ಟರೆ ಭೇಟಿ ಮಾಡ್ತಿವಿ. ಯಡಿಯೂರಪ್ಪ ಆ ಆಡಿಯೋದಲ್ಲಿ ಎಲ್ಲವನ್ನು ಹೇಳಿದ್ದಾರೆ. ಖುದ್ದು ಅಮಿತ್ ಷಾ ಇದರ ಉಸ್ತುವಾರಿ ವಹಿಸಿದ್ರು. ಅವರ ಸೂಚನೆಯಂತೆ ನಾನು ಆಪರೇಷನ್ ಕಮಲ‌ ಮಾಡಿದೆ ಎಂದಿದ್ದಾರೆ. ಈ ಮೂಲಕ ಅನೈತಿಕವಾಗಿ ಅಧಿಕಾರಕ್ಕೆ‌ ಬಂದಿದ್ದಾರೆ. ಇಂತಹ ಕೆಲಸ ಮಾಡಿರುವ ಅಮಿತ್ ಷಾ ಮಂತ್ರಿಯಾಗಿರಬಾರದು. ಬಿಎಸ್‌ವೈ ಸಿಎಂ ಆಗಿರಬಾರದು. ಅವರಿಬ್ಬರನ್ನ ವಜಾಗೊಳಿಸಿ ಅಂತ ರಾಷ್ಟ್ರಪತಿಗಳಿಗೆ ದೂರು ಕೊಡ್ತಿವಿ ಎಂದರು.

ಅಮಿತ್ ಶಾ ಗೆ ಅಧಿಕಾರದಲ್ಲಿ ಇರಲು ನೈತತಿಕ ಹಕ್ಕು ಇಲ್ಲ. ಪಕ್ಷಾಂತರಕ್ಕೆ ಅವರದೇ ಕುಮ್ಮಕ್ಕು ನೀಡಿದ್ದಾರೆ. ಪಕ್ಷಾಂತರ ಮಾಡಿಸಿ ಅಧಿಕಾರಕ್ಕೆ ಬಂದಿದ್ದಾರೆ ಇದು ಅನೈತಿಕ ಸರ್ಕಾರ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘನೆ ಮಾಡಲು ಹೊರಟಿದ್ದಾರೆ. ಅಧಿಕಾರದಲ್ಲಿ ಇರಲು ಅವ್ರಿಗೆ ಯಾವ ನೈತಿಕತೆ ಇದೆ ಎಂದು  ಮಾಜಿ ಸಿ ಎಂ ಸಿದ್ದರಾಮಯ್ಯ ಕಿಡಿಕಾರಿದರು.

ಅನರ್ಹರ ವಿಚಾರವಾಗಿ ಜೆಡಿಎಸ್‌ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಅವರು ಹೋರಾಟ ಮಾಡ್ತಾರಾ ಬಿಡ್ತಾರಾ ಅಂತ ಅವರನ್ನೆ ಕೇಳಿ. ಅವರು ಬಿಜೆಪಿ ಬಗ್ಗೆ ಸಾಫ್ಟ್ ಆಗಿದ್ದಾರಾ ಹಾರ್ಡ್ ಆಗಿದ್ದಾರಾ ಅನ್ನೋದನ್ನು ಅವರನ್ನೆ ಕೇಳಿ. ಅನರ್ಹರ ವಿಚಾರದಲ್ಲಿ ನಮ್ಮ‌ ಹೋರಾಟ ಮುಂದುವರೆಯುತ್ತದೆ. ಚುನಾವಣೆ ಮುಂದೂಡುವ ಅರ್ಜಿಗೆ ಆಕ್ಷೇಪ ಹಾಕಿ ಅಂತ ನಮ್ಮ ಲಾಯರ್ ಗೆ ಹೇಳ್ತಿವಿ ಎಂದು ತಿಳಿಸಿದರು.

ಡಿಕೆಶಿ ಮೈಸೂರು ಪ್ರವಾಸ: ಇದರಲ್ಲಿ ಬೇರೆ ಏನು ಇಲ್ಲ….

ಡಿಕೆ ಶಿವಕುಮಾರ್  ಎರಡು ದಿನಗಳ ಕಾಲ ಮೈಸೂರು ಪ್ರವಾಸ ಕೈಗೊಂಡ ವಿಚಾರ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಅವರು ದೇಗುಲಗಳಿಗೆ ಭೇಟಿ ನೀಡಲು ಮೈಸೂರಿಗೆ ಬಂದಿದ್ರು. ಈ ವೇಳೆ ಕಾಂಗ್ರೆಸ್ ಕಚೇರಿಗು ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ಬೇರೆ ಏನು ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದಲ್ಲಿ ಡಿಕೆಶಿ ಸಿಎಂ ಆಗಬೇಕೆಂಬ ಹೇಳಿಕೆಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ಅದು ಮಾತನಾಡಿದ ಕೆಲವರ ವೈಯಕ್ತಿಕ ಅಭಿಪ್ರಾಯ. ಎಲ್ಲರಿಗು ಅವರದ್ದೇ ಆದ ಅಭಿಪ್ರಾಯ ಇರುತ್ತೆ. ನಿಮ್ಮದ್ದು ಆ ಬಗ್ಗೆ ಏನಾದ್ರು ಅಭಿಪ್ರಾಯ ಇದ್ದರೆ ಹೇಳಿ ಎಂದು ಮಾಧ್ಯಮದವ್ರಿಗೆ ಪ್ರಶ್ನೆ ಹಾಕಿದರು.

ಟಿಪ್ಪು ಜಯಂತಿ ಆಚರಣೆ ಮಾಡಿದ್ರೆ ಎಲ್ಲಿಯೂ ಗಲಾಟೆ ಆಗಲ್ಲ…

ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಸರ್ಕಾರ ಅವಕಾಶ ನೀಡದ ಬಗ್ಗೆ ಹರಿಹಾಯ್ದ ಸಿದ್ಧರಾಮಯ್ಯ,  ಬಿಜೆಪಿ ದಾರ ಇಲ್ಲದೆ ಬುಗುರಿ ಆಡಿಸುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆಗೆ ರಾಜ್ಯದ ಜನರ ವಿರೋಧ ಇಲ್ಲ. ನ್ಯಾಯಾಲಯ ಸಹ ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿ ಇಲ್ಲ ಎಂದಿದೆ. ಟಿಪ್ಪು ಜಯಂತಿ ಆಚರಣೆ ಮಾಡಿದ್ರೆ ಎಲ್ಲಿಯೂ ಗಲಾಟೆ ಆಗಲ್ಲ. ಗಲಾಟೆ ಮಾಡಿದ್ರೆ ಅದು ಆ ಆರ್‌ಎಸ್‌ಎಸ್‌ನವರು ಮಾಡ್ತಾರೆ. ನಾವು ಮೂರು ವರ್ಷ ಮಾಡಲಿಲ್ವ ಆಗ ಏನಾದ್ರು ಗಲಾಟೆ ಆಗಿತ್ತಾ? ಕೊಡಗು ಬಿಟ್ಟು ಎಲ್ಲಾದರೂ ಗಲಾಟೆ ಆಯ್ತಾ? ಕೊಡಗಿನ ಗಲಾಟೆಯನ್ನು ತಡೆಯಬಹುದಿತ್ತು. ಪೊಲೀಸರ ಬೇಜವಾಬ್ದಾರಿಯಿಂದ ಗಲಾಟೆ ಆಗಿ ಬಿಡ್ತು ಎಂದು ತಿಳಿಸಿದರು.

ಮೈಸೂರಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡದೆ ಇರೋದು ತಪ್ಪು. ಬಿಜೆಪಿ ಸರ್ಕಾರ ಅನುಮತಿ ನೀಡಬೇಡಿ ಎಂದಿರಬೇಕು, ಅದಕ್ಕೆ ನೀಡಿಲ್ಲ. ಖಾಸಗಿಯಾಗಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

Key words: Complaint -Presidents  Former CM Siddaramaiah – – Tipu Jayanthi -mysore