Friday, July 31, 2026

BDA Apartments

Home Front Page ಸ್ವಾಭಿಮಾನ ಇದ್ದರೆ ಬಿಎಸ್ ಯಡಿಯೂರಪ್ಪ ನಮ್ಮ ಪಕ್ಷ ಸೇರಿಕೊಳ್ಳಲಿ- ಕಾಂಗ್ರೆಸ್ ಗೆ ಆಹ್ವಾನಿಸಿದ ಈಶ್ವರ್ ಖಂಡ್ರೆ

ಸ್ವಾಭಿಮಾನ ಇದ್ದರೆ ಬಿಎಸ್ ಯಡಿಯೂರಪ್ಪ ನಮ್ಮ ಪಕ್ಷ ಸೇರಿಕೊಳ್ಳಲಿ- ಕಾಂಗ್ರೆಸ್ ಗೆ ಆಹ್ವಾನಿಸಿದ ಈಶ್ವರ್ ಖಂಡ್ರೆ

ಬೀದರ್,ನ,8,2019(www.justkannada.in): ಸಿಎಂ ಬಿಎಸ್ ಯಡಿಯೂರಪ್ಪಗೆ   ಕಾಂಗ್ರೆಸ್ ಪಕ್ಷ ಸೇರುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಓಪನ್ ಆಗಿಯೇ ಆಫರ್ ನೀಡಿದ್ದಾರೆ.

ಬೀದರ್ ನ ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಿಎಂ ಬಿ ಎಸ್ ಯಡಿಯೂರಪ್ಪರನ್ನ ಕಾಂಗ್ರೆಸ್ ಗೆ ಆಹ್ವಾನಿಸಿದ್ದಾರೆ. ಬಿಎಸ್ ವೈ ಗೆ ಅವರ ಹೈಕಮಾಂಡ್ ತುಂಬಾ ಕಿರುಕುಳ ನೀಡುತ್ತಿದೆ. ಪ್ರಧಾನಿ ಮೋದಿ ನೆರೆ ಸಂತ್ರಸ್ತರ ಬಗ್ಗೆ ಹೇಳಲು ಹೋದರೆ ಪ್ರಧಾನಿ ಭೇಟಿಗೆ ಅವಕಾಶ ಕೊಟ್ಟಿಲ್ಲ. ಇದು ಕರ್ನಾಟಕದ 7 ಕೋಟಿ ಕನ್ನಡಿಗರಿಗೆ ಮಾಡಿದಂತಹ ಅವಮಾನ. ಬಿಎಸ್ ವೈ ಗೆ ಸ್ವಾಭಿಮಾನ ಇದ್ದರೆ ಅವರು ನಮ್ಮ ಪಕ್ಷಕ್ಕೆ ಸೇರಿಕೊಳ್ಳಲಿ ಎಂದು ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ.

Key words: Join -our party – self-esteem- Ishwar Khandre- invited – CM BS Yeddyurappan’- Congress