ಲೋಕಸಭೆ ಚುನಾವಣೆ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರೀಲ್ಸ್  ಹಾಗೂ ವಿಡಿಯೋ ಸ್ಪರ್ಧೆ.

ಮೈಸೂರು,ಏಪ್ರಿಲ್, 2, 2024(www.justkannada.in ):  ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಅಂಗವಾಗಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಎಲ್ಲರೂ ಚುನಾವಣೆಯ ಹಬ್ಬದಲ್ಲಿ ಭಾಗಿದಾರರಾಗಲು ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ  ರೀಲ್ಸ್  ಹಾಗೂ ವಿಡಿಯೋ ಮಾಡುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಆಸಕ್ತ ಸಾರ್ವಜನಿಕರು ಮತದಾನದ ಮಹತ್ವ, ಪ್ರತಿ ವೋಟಿನ ಮೌಲ್ಯ, ನೈತಿಕ ಮತದಾನ ಮತ್ತು ಎಲ್ಲಾ ವರ್ಗಗಳ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುವ (ಪಕ್ಷಾತೀತವಾಗಿ ಯಾವುದೇ ರಾಜಕೀಯ ವ್ಯಕ್ತಿ ಹೋಲಿಕೆ ಇಲ್ಲದಂತೆ) ಕುರಿತಾಗಿ ಗರಿಷ್ಠ 2 ನಿಮಿಷ ಅವಧಿಯ ರೀಲ್ಸ್  ಹಾಗೂ ವಿಡಿಯೋಗಳನ್ನು ತಯಾರಿಸಿ  sveepmysuru2018@gmail.com ಈ ಇ-ಮೇಲ್ ವಿಳಾಸಕ್ಕೆ ಏಪ್ರಿಲ್ 10 ರೊಳಗೆ ಕಳುಹಿಸಿಕೊಡಬಹುದಾಗಿದೆ.

ಉತ್ತಮ ಸಂದೇಶವುಳ್ಳ ಮೂರು ಆಯ್ಕೆಗಳಿಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ  ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಕೆ.ಎಂ.ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Competition, District, Sweep Committee.