‘ಬಹುರೂಪಿ’ಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ.

ಬೆಂಗಳೂರು, ಏಪ್ರಿಲ್,2, 2024 (www.justkannada.in): ‘ಬಹುರೂಪಿ’ ಪ್ರಕಟಿಸಿದ ‘ಕೆರೆ-ದಡ’ ಕೃತಿ ಪ್ರಕಾಶನ ರಂಗದ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.

‘ಪಬ್ಲಿಷಿಂಗ್ ನೆಕ್ಸ್ಟ್’ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಹಿರಿಯ ಕಲಾವಿದ ಸುಧಾಕರ ದರ್ಬೆ ರೂಪಿಸಿದ ಮುಖಪುಟ ಮೊದಲ ಸ್ಥಾನ ಪಡೆದಿದೆ. ಪ್ರತೀ ವರ್ಷ ಪ್ರಕಾಶನ ರಂಗದ ವಿವಿಧ ವಿಭಾಗಗಳಲ್ಲಿ ‘ಪಬ್ಲಿಷಿಂಗ್ ನೆಕ್ಸ್ಟ್’ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದು ಇದೇ ಮೊದಲ ಬಾರಿಗೆ ಕನ್ನಡದ ಕೃತಿಯೊಂದು ತನ್ನ ಮುಖಪುಟ ವಿನ್ಯಾಸಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿದೆ.

ಭಾರತದ ಎಲ್ಲಾ ಭಾಷೆಗಳನ್ನು ಒಳಗೊಂಡು ಜರುಗಿದ ಈ ಮುಖಪುಟ ಸ್ಪರ್ಧೆಯಲ್ಲಿ ಅನೇಕ ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳು ಭಾಗವಹಿಸಿದ್ದವು. ಈ ಹಿಂದೆ ಬಹುರೂಪಿಯ ‘ದುಪ್ಪಟ್ಟು’ ‘ಛೂಮಂತ್ರಯ್ಯನ ಕಥೆಗಳು’ ಹಾಗೂ ‘ಅಕ್ಕಯ್’ ಕೃತಿಗಳು ರನ್ನರ್ ಅಪ್ ಆಗಿದ್ದವು

ಪತ್ರಿಕಾ ವಿನ್ಯಾಸಕಾರರಾದ ಸುಧಾಕರ ದರ್ಬೆ ಅವರು ಪುತ್ತೂರು ಮೂಲದ ದರ್ಬೆ ಗ್ರಾಮದವರು. ಅನೇಕ ಕೃತಿಗಳಿಗೆ ಇವರು ರಚಿಸಿರುವ ಮುಖಪುಟ ಹಾಗೂ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.

Key words: National award, Bahurupi