Sunday, September 13, 2026

BDA Apartments

ಕಾಮನ್‌ ವೆಲ್ತ್‌ ಗೇಮ್ಸ್‌: ಕಂಚಿನ ಪದಕಕ್ಕೆ ಕೊರಳೊಡ್ಡಿದ ಕನ್ನಡತಿ ಮೈಸೂರಿನ ...
Home Front Page ಕಾಮನ್‌ ವೆಲ್ತ್‌ ಗೇಮ್ಸ್‌: ಕಂಚಿನ ಪದಕಕ್ಕೆ ಕೊರಳೊಡ್ಡಿದ ಕನ್ನಡತಿ ಮೈಸೂರಿನ ಕೆ.ಎಸ್ ಶಿಲ್ಪಾ

ಕಾಮನ್‌ ವೆಲ್ತ್‌ ಗೇಮ್ಸ್‌: ಕಂಚಿನ ಪದಕಕ್ಕೆ ಕೊರಳೊಡ್ಡಿದ ಕನ್ನಡತಿ ಮೈಸೂರಿನ ಕೆ.ಎಸ್ ಶಿಲ್ಪಾ

ಗ್ಲಾಸ್ಗೊ,ಜುಲೈ,28,2026 (www.justkannada.in): ಜುಲೈ 23ರಿಂದ ಸ್ಕಾಟ್‌ ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ಆರಂಭವಾಗಿರುವ 23ನೇ ಕಾಮನ್‌ ವೆಲ್ತ್ ಗೇಮ್ಸ್ 2026 ರಲ್ಲಿ ಕನ್ನಡತಿ ಮೈಸೂರಿನ ಕೆ.ಎಸ್ ಶಿಲ್ಪಾ ಅವರು ಗುಂಡು ಎಸೆತದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಗುಂಡು ಎಸೆತ ಮಹಿಳೆಯರ ಎಫ್-57 ವಿಭಾಗದಲ್ಲಿ ಸ್ಪರ್ಧೆ ಒಡ್ಡಿದ ಭಾರತದ ಪ್ಯಾರ ಅಥ್ಲೀಟ್ ಕೆಎಸ್ ಶಿಲ್ಪಾ ಅವರು 7.26 ಮೀಟರ್ ದೂರಕ್ಕೆ ಎಸೆಯುವ ಮೂಲಕ  ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದಾರೆ.ಕಾಮನ್‌ ವೆಲ್ತ್‌ ಗೇಮ್ಸ್‌ shilpa

ಮೈಸೂರು ಜಿಲ್ಲೆ ಕೆಆರ್ ನಗರ ತಾಲ್ಲೂಕಿನ ಕಂಚುಗಾರಕೊಪ್ಪಲಿನ ಬಡರೈತ ಕುಟುಂಬದಲ್ಲಿ ಜನಿಸಿರುವ  ಕೆ.ಎಸ್ ಶಿಲ್ಪಾ ಅವರು ಸವಾಲುಗಳನ್ನ ಮೆಟ್ಟಿ ಸಾಧನೆ ಮಾಡಿದ್ದಾರೆ. 4ನೇ ವಯಸ್ಸಿನಲ್ಲಿ ಅಪಘಾತದಲ್ಲಿ ಶಿಲ್ಪಾ ಅವರು ಕಾಲು ಕಳೆದುಕೊಂಡಿದ್ದರು.ಕಂಚಿನ ಪದಕಕ್ಕೆ ಕೊರಳೊಡ್ಡಿದ ಕನ್ನಡತಿ ಮೈಸೂರಿನ ಕೆ.ಎಸ್ ಶಿಲ್ಪಾ jk02_new jk02 new

Key words: Commonwealth Games, Mysore,  KS Shilpa, wins, bronze medal