ನವದೆಹಲಿ,ಜೂನ್,1,2026 (www.justkannada.in): ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಪರಿಣಾಮ ಮತ್ತೆ ತಟ್ಟಿದ್ದು, ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಮತ್ತೆ ಏರಿಕೆಯಾಗಿದೆ.
ಕಮರ್ಷಿಯಲ್ ಸಿಲಿಂಡರ್ ದ 42 ರೂ. ಹೆಚ್ಚಳವಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಅಸ್ತಿತ್ವಕ್ಕೆ ಬಂದಿದೆ. ಇನ್ನು ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ 46 ರೂ. ಏರಿಕೆಯಾಗಿ, 3,198 ರೂ.ಗೆ ತಲುಪಿದೆ.
ಈ ಪರಿಷ್ಕರಣೆಯೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ರಿಟೇಲ್ ದರ 3,113.50 ರೂ.ಗೆ ಏರಿಕೆಯಾಗಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಉದ್ಯಮಗಳಿಗೆ ಈ ದರ ಏರಿಕೆ ಇನ್ನಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ. ಕಳೆದ ತಿಂಗಳು ಕಮರ್ಷಿಯಲ್ ಸಿಲಿಂಡರ್ ದರ 991 ರೂ. ಏರಿಕೆ ಆಗಿ 3,152 ರೂ. ಆಗಿತ್ತು.
Key words: Commercial cylinder, prices, hiked, again







