24 ಗಂಟೆಯೊಳಗೆ ಬೆಂಗಳೂರಿಗೆ ಬಂದು ಹಣ  ವಾಪಸ್  ನೀಡುವೆ- ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ನಿಂದ ಮತ್ತೊಂದು ವಿಡಿಯೋ ರಿಲೀಸ್

ಬೆಂಗಳೂರು,ಜು,15,2019(www.justkannada.in):  ಸಾವಿರಾರು ಹೂಡಿಕೆದಾರರಿಗೆ ವಂಚನೆ ಮಾಡಿ ತಲೆಮರಿಸಿಕೊಂಡಿರುವ  ಐಎಂಎ ಕಂಪನಿ  ಮುಖ್ಯಸ್ಥ ಮನ್ಸೂರ್ ಖಾನ್ ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು 24 ಗಂಟೆಗಳಲ್ಲಿ ಬೆಂಗಳೂರಿಗೆ ಹಿಂತಿರುಗಿ ಹಣ ವಾಪಸ್ ನೀಡುತ್ತೇನೆ ಎಂದಿದ್ದಾನೆ.

24 ಗಂಟೆಯೊಳಗೆ ಬೆಂಗಳೂರಿಗೂ ಹಿಂತಿರುಗಿ ಹಣ ವಾಪಸ್ ನೀಡುತ್ತೇನೆ. ಪೊಲೀಸರು ನನ್ನನ್ನ ಕಾಪಾಡುತ್ತಾರಾ ಎಂದು ವಿಡಿಯೋದಲ್ಲಿ ಮನ್ಸೂರ್ ಖಾನ್ ಪ್ರಶ್ನೆ ಮಾಡಿದ್ದಾನೆ.  ಸಾವಿರಾರು ಹೂಡಿಕೆದಾರರಿಗೆ ಐಎಂಎ ಕಂಪನಿ ವಂಚನೆ ಮಾಡಿರುವ ಪ್ರಕರಣ ಕುರಿತು ಎಸ್ ಐಟಿ ತನಿಖೆ ನಡೆಸುತ್ತಿದೆ. ಈ ನಡುವೆ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಸುದ್ದಿ ಹರಿಡಿದೆ.

ಈ ಬೆನ್ನಲ್ಲೆ ಮನ್ಸೂರ್ ಖಾನ್ 24 ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರುವುದಾಗಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು ಇದು ಸತ್ಯವೇ ಇಲ್ಲ ಸುಳ್ಳೇ ಎಂಬುದನ್ನ ಕಾದು ನೋಡಬೇಕು.

Key words: come back – Bangalore- within- 24 hours -IMA chief- Mansur Khan