ಗುರುವಾರ ಸಮ್ಮಿಶ್ರ ಸರ್ಕಾರ  ವಿಶ್ವಾಸಮತ ಕಳೆದುಕೊಳ್ಳುವುದು ಖಚಿತ- ಬಿಎಸ್ ಯಡಿಯೂರಪ್ಪ ನುಡಿ…

ಬೆಂಗಳೂರು,ಜು,15,.2019(www.justkannada.in):  ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚಿಸಲು ಗುರುವಾರ ಬೆಳಿಗ್ಗೆ 11 ಗಂಟೆಗೆ ಸಮಯ ನಿಗದಿಯಾಗಿದ್ದು, ಅಂದು ಸಮ್ಮಿಶ್ರ ಸರ್ಕಾರ ವಿಶ್ವಾಸಮತ ಕಳೆದುಕೊಳ್ಳುವುದು ಖಚಿತ ಎಂದು ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಕಲಾಪ ಸಮಿತಿ ಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಗುರುವಾರ ವಿಶ್ವಾಸ ಮತಯಾಚನೆಗೆ ಸಮಯ ನಿಗದಿ ಮಾಡಲಾಯಿತು. ಆದರೆ ಈ ವೇಳೆ ಬಿಜೆಪಿ ನಾಯಕರು ಗುರುವಾರದವರೆಗೂ ಸದನ ನಡೆಸದಂತೆ ಪಟ್ಟುಹಿಡಿದಿದ್ದರು. ಬಿಜೆಪಿ ನಾಯಕರ ಬೇಡಿಕೆಗೆ ಮಣಿದ ಸ್ಪೀಕರ್ ರಮೇಶ್ ಕುಮಾರ್ ಕಲಾಪವನ್ನ ಗುರುವಾರಕ್ಕೆ ಮುಂದೂಡಿದರು.

ಕಲಾಪ ಮುಂದೂಡಿದ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬಿಎಸ್ ಯಡಿಯೂರಪ್ಪ,  ಬಿಎಸಿ ಮೀಟಿಂಗ್ ಚೆನ್ನಾಗಿ ಆಗಿದೆ. ಸ್ಪೀಕರ್ ಕೊಠಡಿಯಲ್ಲಿ ಸೌಹಾರ್ಧಯುತ ಮಾತುಕತೆ ನಡೆಯಿತು.  ಸ್ಪೀಕರ್ ತೆಗೆದುಕೊಂಡ ನಿಲುವು ಸ್ವಾಗತಾರ್ಹವಾದದ್ದು ಎಂದು ಹೇಳಿದರು.

ಹಾಗೆಯೇ ನಮ್ಮ ಶಾಸಕರು ರೆಸಾರ್ಟ್ ಗೆ ತೆರಳಲಿದ್ದಾರೆ. ಗುರುವಾರ ಸಮ್ಮಿಶ್ರ ಸರ್ಕಾರ ವಿಶ್ವಾಸಮತ ಕಳೆದುಕೊಳ್ಳುವುದು ಖಚಿತ ಎಂದು ಭವಿಷ್ಯ ನುಡಿದರು.

Key words: Alliance-  government – sure – lose –Thursday-BS Yeddyurappa.