ಕಾರು ಮತ್ತು ಬೈಕ್ ನಡುವೆ ಡಿಕ್ಕಿ: ತಂದೆ, ಮಗಳು ಸಾವು.

ರಾಮನಗರ,ಏಪ್ರಿಲ್,3,2023(www.justkannada.in): ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ತಂದೆ ಮತ್ತು ಮಗಳು ಇಬ್ಬರೂ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸಾಬರಪಾಳ್ಯದಲ್ಲಿ ನಡೆದಿದೆ.

ಕಲ್ಯಾ ಗ್ರಾಮದ ನಿವಾಸಿ ಯೋಗೇಶ್(47)  ಪುತ್ರಿ ಹರ್ಷಿತಾ(14) ಮೃತಪಟ್ಟವರು. ಯೋಗೇಶ್ ಮಗಳು ಹರ್ಷಿತಾಳನ್ನ ಬೈಕ್ ನಲ್ಲಿ ಜಮಾಸಾಬ್ ಪಾಳ್ಯದ ಬಳಿಯ ವೆಂಕಟ್ ಪಬ್ಲಿಕ್ ಶಾಲೆಗೆ ಬಿಡಲು ತೆರಳುತ್ತಿದ್ದರು. ಈ ವೇಳೆ  ಹಿಂಬದಿಯಿಂದ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮತಂದೆ, ಮಗಳು ಸ್ಥಳದಲ್ಲೆ ಸಾವನ್ನಪಿದ್ದಾರೆ.

ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Collision- between -car – bike- Father-daughter –death