ಛಲವಾದಿ ನಾರಾಯಣ್ ಸ್ವಾಮಿ ಒಬ್ಬ ಪಂಚರ್ ಗಿರಾಕಿ: ಸಿದ್ಧರಾಮಯ್ಯ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ- ಕಾಂಗ್ರೆಸ್ ವಕ್ತಾರ ಸೀತಾರಾಮು.

ಮೈಸೂರು,ಏಪ್ರಿಲ್,3,2023(www.justkannada.in):  ಬಿಜೆಪಿ ರಾಜ್ಯ ಎಸ್.ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ್ ಸ್ವಾಮಿ ಒಬ್ಬ ಪಂಚರ್ ಗಿರಾಕಿ. ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯೋಗ್ಯತೆ ಎಂ.ಎಲ್.ಸಿ ಛಲವಾದಿ ನಾರಾಯಣ್ ಸ್ವಾಮಿಗೆ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ಸೀತಾರಾಮು ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಕಾಂಗ್ರೆಸ್ ವಕ್ತಾರ ಸೀತಾರಾಮು, ಸಿದ್ದರಾಮಯ್ಯರನ್ನು ಟೀಕಿಸುವ ಸಲುವಾಗಿಯೇ ಛಲವಾದಿ ನಾರಾಯಣ್ ಅವರನ್ನು ಬಿಜೆಪಿ ಎಂ.ಎಲ್.ಸಿ ಮಾಡಿದ್ದಾರೆ. ದಲಿತರಿಗೆ ಹೆಚ್ಚು ಹಣ ನೀಡಿದ್ದು ಬಿಜೆಪಿ ಎಂದು ಸುಳ್ಳು ಹೇಳುತ್ತಿದ್ದಾರೆ. ದಲಿತ ಜನರನ್ನು ಮೂರ್ಖರನ್ನು ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಅವಧಿಯ ಬಜೆಟ್ ನಲ್ಲಿ ದಲಿತರಿಗೆ ಕೇವಲ 22,261ಕೋಟಿ ಖರ್ಚು ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. 2013ರಿಂದ ರಿಂದ 2018ರ ಅವಧಿಯಲ್ಲಿ ನಮ್ಮ ಸರ್ಕಾರ ಒಟ್ಟು 88,395ಕೋಟಿ ಹಣವನ್ನು ಬಜೆಟ್ ನಲ್ಲಿ ದಲಿತರಿಗಾಗಿ ಖರ್ಚು ಮಾಡಿದ್ದಾರೆ. 2019ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಬಜೆಟ್ ನಲ್ಲಿ 3ಲಕ್ಷದ 90 ಸಾವಿರ ಕೋಟಿ ರೂ. ಬಜೆಟ್ ಮಂಡನೆ ಮಾಡಿ. ಇದೀಗ ಕೇವಲ 30ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದೆ. ಇದು ದಲಿತ ವಿರೋಧಿ ನಡೆಯಲ್ಲವೆ..? ನಿಮ್ಮ ಪಕ್ಷದ ಈ ನಡೆಯನ್ನು ನೀವು ಖಂಡಿಸುತಿಲ್ಲ. ಬಿಜೆಪಿಯಲ್ಲಿ ನಾರಾಯಣ ಸ್ವಾಮಿ ನಾಯಿಮರಿಯಂತೆ ಕೆಲಸ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ಅವರಿಗೆ ಕಳೆದ ಬಾರಿ ದೇವನಹಳ್ಳಿಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. ಆದರೂ ಸಿದ್ದರಾಮಯ್ಯ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ರು. ಎಲ್ಲವನ್ನೂ ಅನುಭವಿಸಿ ಟಿಕೆಟ್ ಕೊಡಲಿಲ್ಲ ಎಂದು ಬಿಜೆಪಿಗೆ ಸೇರಿದ್ರಿ. ಮೀಸಲಾತಿ ಬಗ್ಗೆ ಈಗಲಾದರೂ ಮಾತನಾಡಿ ಎಂದು ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಸೀತಾರಾಮು  ಹರಿಹಾಯ್ದರು.

Key words: Chalavadi Narayan Swamy –not – ability -talk –about- Siddaramaiah-Congress spokesperson -Sitharam