ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾಮೀನು ಅವಧಿ ಏ.13ರವರೆಗೆ ವಿಸ್ತರಣೆ.

ಸೂರತ್,ಏಪ್ರಿಲ್,3,2023(www.justkannada.in): ಮೋದಿ ಉಪನಾಮ ಹೇಳಿಕೆ ವಿಚಾರ, ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲುಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜಾಮೀನು ಅವಧಿಯನ್ನ ಸೂರತ್ ನ ಸೆಷನ್ಸ್ ಕೋರ್ಟ್ ವಿಸ್ತರಿಸಿದೆ.

ಏಪ್ರಿಲ್ 13ರವರೆಗೆ ಜಾಮೀನು ಅವಧಿಯನ್ನ ಸೂರತ್ ಸೆಷನ್ಸ್ ಕೋರ್ಟ್ ವಿಸ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ದ ಮಾನಹಾನಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಸೂರತ್ ಸೆಷ‍ನ್ಸ್ ಕೋರ್ಟ್ ರಾಹುಲ್ ಗಾಂಧಿಯನ್ನ ದೋಷಿ ಎಂದು ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ನಂತರ ರಾಹುಲ್ ಗಾಂಧಿ ಅವರಿಗೆ ಜಾಮೀನು ಮಂಜೂರಾಗಿತ್ತು. ಇದೀಗ ಮತ್ತೆ ಏಪ್ರಿಲ್ 13ರವರೆಗೆ ಜಾಮೀನು ಅವಧಿ ವಿಸ್ತರಣೆಯಾಗಿದ್ದು ಮೇ13 ರಂದು ಮತ್ತೆ ಕೋರ್ಟ್ ವಿಚಾರಣೆ ನಡೆಸಲಿದೆ.

Key words: Bail- period -Congress leader- Rahul Gandhi -extended -till -August 13