ಜೆಡಿಎಸ್ ವಿಳಂಬ ನೀತಿಗೆ ಗರಂ: ನಾನು ಈ ಬಾರಿ ಸ್ಪರ್ಧೆ ಮಾಡಲ್ಲ ಎಂದ ಎನ್.ಆರ್ ಕ್ಷೇತ್ರದ  ಮುಖಂಡ ಅಬ್ದುಲ್ ಅಜೀಜ್.

ಮೈಸೂರು,ಏಪ್ರಿಲ್,3,2023(www.justkannada.in): ಎನ್.ಆರ್ ಕ್ಷೇತ್ರ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವಿಳಂಬ ನೀತಿಗೆ ಗರಂ ಆಗಿರುವ ಜೆಡಿಎಸ್ ಮುಖಂಡ ಅಬ್ದುಲ್ ಅಜೀಜ್, ಕೂಡಲೇ ಪಕ್ಷ ನಿರ್ಧಾರ ಪ್ರಕಟಿಸದಿದ್ದರೇ. ಬೇರೆ ಪಕ್ಷಕ್ಕೆ ಬೆಂಬಲ ಸೂಚಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ನಡೆಗೆ  ಬೇಸರ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡ ಅಬ್ದುಲ್ ಅಜೀಜ್, ಪಕ್ಷ ಎಲ್ಲೋ ಒಂದು ಕಡೆ ಕಡೆಗಣಿಸುತ್ತಿದೆ ಎಂದು ಬೆಂಬಲಿಗರ ಸಭೆ  ನಡೆಸಿದರು. ಸಭೆ ಮೂಲಕ ಬೆಂಬಲಿರ ಅಭಿಪ್ರಾಯ ಸಂಗ್ರಹಿಸಿದ ಅಬ್ದುಲ್ ಅಜೀಜ್, ತಮ್ಮ ಮುಂದಿನ ನಡೆಯನ್ನ ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ. ಪಕ್ಷದಲ್ಲಿ ನಮ್ಮ ಬೆಂಬಲಿಗರ ಮೂಲೆ ಗುಂಪು ಮಾಡುತ್ತಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪಕ್ಷ ಸಂಘಟನೆ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಚುನಾವಣಾ ರೂಪುರೇಷೆಗಳ ಸಿದ್ದಪಡಿಸಲು ಸೂಚನೆ ನೀಡದ ಜೆಡಿಎಸ್ ವರಿಷ್ಠರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಅಬ್ದುಲ್ ಅಜೀಜ್, ಎನ್ ಆರ್ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ಪರ್ಧೆ ಮಾಡುತ್ತೇನೆ ಎಂದು ಎರಡು ತಿಂಗಳ ಹಿಂದೆನೇ ಹೇಳಿದರು. ಅದಕ್ಕೆ ನಾನು ಸಂಪೂರ್ಣವಾಗಿ ಒಪ್ಪಿಗೆ ನೀಡಿ ಸ್ವಾಗತಿಸಿದ್ದೆ. ಆದರೆ, ಇನ್ನೂ ಕೂಡ ಕ್ಷೇತ್ರದತ್ತ ತಲೆ ಹಾಕದೆ ಕ್ಷೇತ್ರದಲ್ಲಿ ಬೇರೆಯವರಿಗೆ ಜವಾಬ್ದಾರಿ ಕೊಡಲು ಹೊರಟಿದ್ದಾರೆ ಈ‌ ನಿಟ್ಟಿನಲ್ಲಿ ನಾನು ಅಸಮಧಾನಗೊಂಡಿರವುದು ಸತ್ಯ. ಮೈಸೂರಿನಲ್ಲಿ ಜೆಡಿಎಸ್ ಬೃಹತ್ ಸಮಾವೇಶಕ್ಕೂ ಹೋಗಲಿಲ್ಲ. ಅಂದ ಮೇಲೆ ಅಸಮಧಾನ ಇರುವುದು ಎಲ್ಲರಿಗೂ ಗೊತ್ತಾಗಿದೆ ಎಂದಿದ್ದಾರೆ.

ನಾನು ತರಾತುರಿಯಲ್ಲಿ ನಿಲ್ಲು ಅಂದರೆ ನಿಲ್ಲಲ್ಲ. ನಾನು ಈ ಬಾರಿ ಸ್ಪರ್ಧೆ ಮಾಡಲ್ಲ ಎಂದು ಕಡ್ಡಿ ತುಂಡಾದಂತೆ ತಮ್ಮ ನಿರ್ಧಾರ ಪ್ರಕಟಿಸಿದರು. ಅಲ್ಲದೆ ನನಗೆ ಯಾವ ಪಕ್ಷ ಸೂಕ್ತ ಎನಿಸುತ್ತದೆ ಅದಕ್ಕೆ ನನ್ನ ಬೆಂಬಲ ಸೂಚಿಸುತ್ತೇನೆ. ಕೂಡಲೇ ಪಕ್ಷ ನಿರ್ಧಾರ ಪ್ರಕಟಿಸಬೇಕು. ಇಲ್ಲ ಅಂದರೆ ಬೇರೆ ಪಕ್ಷಕ್ಕೆ ಬೆಂಬಲ ಸೂಚಿಸಬೇಕಾಗುತ್ತದೆ ಎಂದು ಅಬ್ದುಲ್ ಅಜೀಜ್ ಎಚ್ಚರಿಕೆ ನೀಡಿದರು.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ಅಬ್ದುಲ್ ಅಜೀಜ್ ಕಾಂಗ್ರೆಸ್ ಗೆ ಟಫ್ ಫೈಟ್ ಕೊಟ್ಟಿದ್ದರು.  ಈ ಬಾರಿ ಜೆಡಿಎಸ್ ವಿಳಂಬ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Key words: JDS -delay – not contest – NR Constituency –jds leader -Abdul Aziz