ಹಾಸನದಲ್ಲಿ ನಿರ್ಮಾಣ ಹಂತದ ಮೇಲ್ಸೆತುವೆ ಕುಸಿತ ವಿಚಾರ: ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ದ ಕೇಸ್ ದಾಖಲು…..

ಹಾಸನ,ಮಾ,1333,2020(www.justkannada.in): ನಿನ್ನೆ ಹಾಸನದ ಹೊಸ ಬಸ್ ಸ್ಟಾಂಡ್  ಬಳಿ  ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿತ ಹಿನ್ನೆಲೆ ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಇಂಜಿನಿಯರ್  ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣ ದಾಖಲು ಮಾಡಿದೆ.

ಹಾಸನದ ಹೃದಯ ಭಾಗದಲ್ಲಿರುವ ಬಸ್​ ನಿಲ್ದಾಣದಿಂದ ಎನ್​ಆರ್​ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣವಾಗುತ್ತಿತ್ತು. 42 ಕೋಟಿ ರೂ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ  ಕಾಮಗಾರಿ ನಡೆಯುತ್ತಿತ್ತು. ಆದರೆ ನಿರ್ಮಾಣ ಹಂತದಲ್ಲಿದ್ದ ಈ ಸೇತುವೆ ಕುಸಿತವಾಗಿತ್ತು.

ಈ ಸಂಬಂಧ ಘಟನೆಗೆ ಕಾರ್ಮಿಕರು ಮತ್ತು‌ ಗುತ್ತಿಗೆದಾರರ ಲೋಪ ಕಾರಣ. ಅವರ ತಪ್ಪಿನಿಂದಲೇ ಹಾಸು ಕಂಬಗಳು ಕುಸಿತಗೊಂಡಿವೆ ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಇನ್ನು ಇಡೀ ಘಟನೆ ಬಗ್ಗೆ ತನಿಖೆ ನಡೆಸಲು ಹಾಸನ ಡಿಸಿ ಗಿರೀಶ್ ಆದೇಶ ಮಾಡಿದ್ದಾರೆ.  ಮುರಿದು ಬಿದ್ದಿದ್ದ ಸಿಮೆಂಟ್ ಕಂಬಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.

Key words: collapse – construction- flyover-Hassan-  Case -filed