ಕರೋನಾ ವೈರಸ್ ನಿಂದಲೇ ಕಲ್ಬುರ್ಗಿಯ ವೃದ್ಧ ಸಾವು: ಆರೋಗ್ಯ ಇಲಾಖೆ ಸ್ಪಷ್ಟನೆ….

ಬೆಂಗಳೂರು,ಮಾ,13,2020(www.justkannada.in): ಕಿಲ್ಲರ್ ಕೊರೋನಾ ಮೊದಲ ಬಲಿ ಪಡೆದಿದ್ದು ಕೊರೋನಾ ವೈರಸ್ ನಿಂದಲೇ ಕಲ್ಬುರ್ಗಿಯ ವೃದ್ಧ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಕಳೆದ 10 ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಕರ್ನಾಟಕಕ್ಕೆ ಮರಳಿದ್ದ  ಕಲ್ಬುರ್ಗಿ ಜಿಲ್ಲೆಯ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ವೃದ್ಧನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಿತ್ತು. ಆದರೆ ಆ ವ್ಯಕ್ತಿ  ಕಳೆದ ಮಂಗಳವಾರ ಮೃತಪಟ್ಟಿದರು.

ಬಳಿಕ ವ್ಯಕ್ತಿ ಕೊರೋನಾ ವೈರಸ್ ನಿಂದ ಮೃತಪಟ್ಟಿರುವ ಬಗ್ಗೆ ಆರೋಗ್ಯ ದೃಢಪಡಿಸಿರಲಿಲ್ಲ. ಇದೀಗ  ಕರಬುರುಗಿಯ ವೃದ್ಧ ಕರೊನಾದಿಂದಲೇ ಮೃತಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಇನ್ನು ಬೆಂಗಳೂರಿನಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ.  ದೇಶದಲ್ಲಿ ಕರೊನಾ ಪೀಡಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದ್ದು  ಇದುವರೆಗೂ ವಿಶ್ವದಾದ್ಯಂತ 4500 ಕ್ಕೂ ಹೆಚ್ಚು ಜನ ಮಾರಕ ಕೊರೋನಾಗೆ ಸಾವನ್ನಪ್ಪಿದ್ದಾರೆ.

Key words: Kalburgi- person- death – coronavirus- Health Department – clearfy.