Tuesday, September 22, 2026

BDA Apartments

ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಶಾಪವಿದ್ದಂತೆ: ಈ ಬಾರಿ ಅತಂತ್ರ ಫಲಿತಾಂಶ ಬರಲ್...
Home Front Page ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಶಾಪವಿದ್ದಂತೆ: ಈ ಬಾರಿ ಅತಂತ್ರ ಫಲಿತಾಂಶ ಬರಲ್ಲ- ಸಚಿವ ಡಾ.ಕೆ.ಸುಧಾಕರ್.

ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಶಾಪವಿದ್ದಂತೆ: ಈ ಬಾರಿ ಅತಂತ್ರ ಫಲಿತಾಂಶ ಬರಲ್ಲ- ಸಚಿವ ಡಾ.ಕೆ.ಸುಧಾಕರ್.

ಚಿಕ್ಕಬಳ್ಳಾಪುರ,ಏಪ್ರಿಲ್,13,2023(www.justkannada.in): ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಶಾಪವಿದ್ದಂತೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭವಿಷ್ಯ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ಈ ಬಾರಿ ಅತಂತ್ರ ಫಲಿತಾಂಶ ಬರಲ್ಲ. ಕಾಂಗ್ರೆಸ್ ನವರು ರಾಜ್ಯದಲ್ಲಿ ಜನರ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಕೆಲವು ಸರ್ವೇಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಕುತಂತ್ರ ಚುನಾವಣೆಯಲ್ಲಿ ಫಲಿಸಲ್ಲ. ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಶಾಪ ಇದ್ದಂತೆ. ಡಬಲ್ ಇಂಜಿನ್ ಸರ್ಕಾರ ಇರಲಿ ಎಂದು ಜನ ಬಯಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ಬರಲ್ಲ ಎಂದರು.ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಶಾಪವಿದ್ದಂತೆ sudhakar sudhakar 1

Key words: coalition government – curse – state-Minister- Dr. K. Sudhakar.