ಎರಡು ಪಕ್ಷಗಳಿಗೂ ನಾನೇ ಟಾರ್ಗೆಟ್: ವರುಣಾದಲ್ಲಿ ಗೆದ್ಧೇ ಗೆಲ್ಲುತ್ತೇನೆ- ಮಾಜಿ ಸಿಎಂ ಸಿದ್ಧರಾಮಯ್ಯ ವಿಶ್ವಾಸ.

ಮೈಸೂರು,ಏಪ್ರಿಲ್,13,2023(www.justkannada.in):  ವರುಣಾ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತಿದ್ದೇನೆ. ಎರಡೂ ಪಕ್ಷಗಳು  ಸೇರಿ ನನ್ನನ್ನು ಮುಗಿಸಲು ಯತ್ನಿಸಿದ್ದಾರೆ. ಎರಡು ಪಕ್ಷಗಳಿಗೆ ನಾನೇ ಟಾರ್ಗೆಟ್. ಆದರೆ  ರಾಜ್ಯದ ಜನರ ಆಶೀರ್ವಾದ ಇರುವವರೆಗೂ ನನ್ನನ್ನ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ವರುಣಾ ಕ್ಷೇತ್ರಕ್ಕೆ ಬಿಜೆಪಿಯವರು ಬೆಂಗಳೂರಿನಿಂದ ಅದ್ಯಾರನ್ನೋ ತಂದಿದ್ದಾರೆ.  ಅವನು ನಿಲ್ಲಲ್ಲ ಅಂದರೂ ವರುಣಾಗೆ ಕರೆ ತಂದಿದ್ದಾರೆ. ಇದು ನನ್ನ ಕೊನೆಯ ಚುನಾವಣೆ. ಯಾರೇ ನಿಂತರೂ ವರುಣಾ ಜನರ ತೀರ್ಪು ಅಂತಿಮ ಎಂದರು.

ನಾನು  ವರುಣಾ ಕ್ಷೇತ್ರದಲ್ಲಿ  ಗೆದ್ಧೇ ಗೆಲ್ಲುತ್ತೇನೆ. ಇದೇ ನನ್ನ ಕೊನೆಯ ಚುನಾವಣೆ. ಚಾಮುಂಡೇಶ್ವರಿ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ. ಚಾಮುಂಡೇಶ್ವರಿಯಲ್ಲಿ ಯಾರೇ ಗೆದ್ದರೂ ನಾನೇ ಶಾಸಕ. ಚಾಮುಂಡೇಶ್ವರಿ ಕ್ಷೇತ್ರವನ್ನ ಮರೆಯುವುದಿಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.

Key words: target – both parties-will -win -Varuna- former CM –Siddaramaiah