ನೆರೆಪೀಡಿತ ಬೆಳಗಾವಿ ವಿಜಯಪುರ ಜಿಲ್ಲೆಗಳಿಗೆ ನಾಳಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ…

ಬೆಂಗಳೂರು,ಆ,4,2019(www.justkannada.in): ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು  ಮಳೆರಾಯನ ಅಬ್ಬರದಿಂದಾಗಿ ಬೆಳಗಾವಿ ಸೇರಿ ಕೆಲವು  ಜಿಲ್ಲೆಗಳು ತತ್ತರಿಸಿವೆ. ಈ ಹಿನ್ನೆಲೆ ನೆರೆಪೀಡಿತ ಪ್ರದೇಶಗಳಿಗೆ ನಾಳೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆ ನೆರೆ ಪೀಡಿತ ಜಿಲ್ಲೆಗಳಾದ ಬೆಳಗಾವಿ, ವಿಜಯಪುರಕ್ಕೆ ಭೇಟಿ ನೀಡುತ್ತೇನೆ. ನಾಳೆ ಬೆಳಿಗ್ಗೆ 10 ಗಂಟೆಗೆ ಹೆಲಿಕಾಪ್ಟರ್ ನಲ್ಲಿ ಬೆಳಗಾವಿಗೆ ತೆರಳುತ್ತೇನೆ. ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಸೂಕ್ತ ವಾತಾವರಣವಿದ್ದರೇ ವೈಮಾನಿಕ ಸಮೀಕ್ಷೆ ಮಾಡುತ್ತೇನೆ ಎಂದರು.

ಹಾಗೆಯೇ ಪ್ರವಾಹದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಇನ್ನು ಸಚಿವಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಸಂಪುಟ ವಿಸ್ತರಣೆ ತಕ್ಷಣ ಮಾಡಲು ಆಗಲ್ಲ. ನಾಳೆ ಸಂಜೆ ನಾನು ದೆಹಲಿಗೆ ತೆರಳುತ್ತೇನೆ.  ನಮ್ಮ ನಾಯಕರು ಸೂಚನೆ ಕೊಟ್ಟ ತಕ್ಷಣ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದರು.

Key words: CM Yeddyurappa- visits – Flood – Belgavi- Vijayapura- districts