ತಮ್ಮ ರಾಜೀನಾಮೆ ಮತ್ತು ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣಗಳನ್ನ ನೀಡಿ ದೋಸ್ತಿ ಪಕ್ಷಗಳಿಗೆ ಕುಟುಕಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್

ಮೈಸೂರು,ಆ,4,2019(www.justkannada.in): ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಕಾರಣವಲ್ಲ. ಸರ್ಕಾರ ನಡೆಸುತ್ತಿದ್ದ ಪಾಲುದಾರ ಮಾಲೀಕರೇ ಕಾರಣ. ನನಗೆ ಆದ ಅವಮಾನದಿಂದ ನೊಂದು ರಾಜೀನಾಮೆ ನೀಡಿದ್ದೇನೆ. ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಆರೋಪಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್, ಸಮ್ಮಿಶ್ರ ಸರ್ಕಾರ ಪತನವಾಗಲು ಬಿಜೆಪಿಯೂ ಕಾರಣವಲ್ಲ. ಸರ್ಕಾರ ಪತನಕ್ಕೆ ಪಾಲುದಾರ ಮಾಲೀಕರೇ ನೇರ ಹೊಣೆ.  ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳಲ್ಲಿ ಆಂತರಿಕ ಸಮನ್ವಯತೆ ಇರಲಿಲ್ಲ. ಹೀಗಾಗಿ ಸರ್ಕಾರ ಪತನಕ್ಕೆ ಅವರೇ ಕಾರಣ ಎಂದರು.

ಹಾಗೆಯೇ  ಮತ ನೀಡಿ ನಮ್ಮನ್ನ ಗೆಲ್ಲಿಸಿದ ಮತದಾರರಿಗೆ ಕ್ಷಮೆಯಾಚಿಸುತ್ತೇನೆ. ನಮ್ಮನ್ನ ಅವರು ಶಾಸಕರ ರೀತಿ ನೋಡಲಿಲ್ಲ. ಕಾಂಗ್ರೆಸ್ ಜೆಡಿಎಸ್  ಪಕ್ಷ ಶಾಸಕರಿಗೆ ಗೌರವ ನೀಡಲಿಲ್ಲ. ಹೀಗಾಗಿ ದಂಗೆ ಎದ್ದು ರಾಜೀನಾಮೆ ನೀಡಿದ್ದೇವೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಹಾಗೂ ಹೊಸ ಸರ್ಕಾರ ರಚನೆಗೆ ನಾವು ಕಾರಣವಲ್ಲ. ನಾವು ಅತೃಪ್ತರಲ್ಲ ದುಡ್ಡಿಗೂ ಮಾರಿಕೊಂಡಿಲ್ಲ. ಪಾಲುದಾರರೇ ಅತೃಪ್ತರು ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಈ ನಡುವೆ ಹೆಚ್.ಡಿ ಕುಮಾರಸ್ವಾಮಿ ನಮ್ಮ ಸ್ನೇಹಿತರು. ಹೆಚ್.ಡಿ ಕುಮಾರಸ್ವಾಮಿ ಸಿಎಂ ಥರ ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಶಿಷ್ಯರೇ ಹೇಳಿದ್ದರು. ಇದು ಸಮ್ಮಿಶ್ರ ಸರ್ಕಾರ ಪತನಕ್ಕೆ ನಾಂದಿಯಾಯಿತು ಎಂದು ಹೆಚ್,ವಿಶ್ವನಾಥ್ ವಿವರಿಸಿದರು.

ಹಾಗೆಯೇ ನನಗಾದ ಅವಮಾನದಿಂದ ನಾನು ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಆದೇಶ ಹೊರಡಿಸಿದರೂ ನನ್ನಿಂದ ಬ್ಲಾಕ್ ಅಧ್ಯಕ್ಷನನ್ನೂ ನೇಮಕ ಮಾಡಲು ಆಗಲಿಲ್ಲ. ಹೀಗಾಗಿ ಅವಮಾನದಿಂದ ಘಾಸಿಗೊಳಗಾಗಿ ರಾಜೀನಾಮೆ ನೀಡಿದ್ದೇನೆ. ಹೆಚ್.ಡಿ ದೇವೇಗೌಡರ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

Key words: disqualified- H. Vishwanath- news conference – Mysore-resignation -fall – coalition government-reason