ಸಿಎಂ ಸಿದ್ದರಾಮಯ್ಯ ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್ – ವಿಪಕ್ಷ ನಾಯಕ ಆರ್.ಅಶೋಕ್.

ಬೆಂಗಳೂರು,ಜನವರಿ,1,2023(www.justkannada.in): ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನ ಒಲೈಸುವ ಕೆಲಸ ಮಾಡುತ್ತಿದ್ದಾರೆ.  ಮತಕ್ಕಾಗಿ ರಾಜಕೀಯ ಮಾಡೋದು ಸಿಎಂ  ಸಿದ್ದರಾಮಯ್ಯ ರಕ್ತದ ಕಣದಲ್ಲಿ ಬಂದಿದೆ. ಸಿದ್ದರಾಮಯ್ಯ ಧರ್ಮ ಒಡೆಯುವ ಬ್ರ್ಯಾಂಡ್ ಅಂಬಾಸಿಡರ್ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ರಾಮ ಈ ದೇಶದ ಆದರ್ಶ ಪುರುಷ. ರಾಮಮಂದಿರ ಆಗಬೇಕು, ರಾಮರಾಜ್ಯ ಆಗಬೇಕು ಎಂಬುದು ನಮ್ಮ ಗುರಿ. ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್‌ನ ರಕ್ತದಲ್ಲಿದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ರಾಮನ ಆರಾಧನೆ ಮಾಡುವುದಾದರೇ  ರಾಮನ ಪೂಜೆ ಮಾಡಬೇಕಿತ್ತು. ರಾಮನ ಹೆಸರು ಹೇಳಿದರೇ ಕಾಂಗ್ರೆಸ್ ಗೆ ಭಯ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ರೈತರ ಕೊರಳಿಗೆ  ಸಿದ್ದರಾಮಯ್ಯ ಸರ್ಕಾರ ಕುಣಿಕೆ ಹಾಕುತ್ತಿದೆ.  ಮತಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

Key words: CM Siddaramaiah – religion-Breaking -Brand Ambassador -R. Ashok.