Wednesday, November 11, 2026

Dasara Wishes

Happy Dasara
Home Front Page ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ- ಸಿಎಂ ಡಿಕೆಶಿ

ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ- ಸಿಎಂ ಡಿಕೆಶಿ

ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ- ಸಿಎಂ ಡಿಕೆಶಿ

ಮೈಸೂರು,ನವೆಂಬರ್,11,2026 (www.justkannada.in): ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ನೂರಾರು ನಾಯಕರನ್ನು ತಯಾರು ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಮಾಜಿ ಸಿಎಂ  ವೀರಪ್ಪ ಮೊಯ್ಲಿ ಅವರು ಬರೆದಿರುವ ‘ವಿಶ್ವಸಂಸ್ಕೃತಿಯ ಮಹಾಯಾನ ಗದ್ಯ ಮಹಾಕಾವ್ಯ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಪಾಲ್ಗೊಂಡು ಮಾತನಾಡಿದರು.

ಮಾಜಿ ಸಿಎಂ ಜೆ.ಹೆಚ್ ಪಾಟೀಲ್ ಅಂತ ಸಾಹಿತ್ಯ ಭಾಷಣಕಾರರನ್ನು ನಾವು ನೋಡೇ ಇಲ್ಲ. ಅಂತವರ ಭಾಷಣವನ್ನು ಪುಸ್ತಕ ಮಾಡಬೇಕು, ಇದನ್ನು ಅವರ ಮಗ ಮಹಿಮಾ ಪಾಟೀಲ್ ಗೆ ಹೇಳಿದ್ದೇನೆ. ನಾನು ಕೂಡ ಗಾಂಧಿ ಬಗ್ಗೆ ಒಂದು ಪುಸ್ತಕ ಬರೆದಿದ್ದೇನೆ. ಸಾಹಿತ್ಯ ಹಾಗೂ ರಾಜಕೀಯ ಎರಡು ಬೇಕು. ಧರ್ಮ ಉಳಿಸಬೇಕು ಸಂಸ್ಕೃತಿ ಬೆಳಸಬೇಕು. ಎಲ್ಲರ ಭಾವನೆಗಳು ಕೂಡ ಒಂದೇ. ಮನುಷ್ಯನ ಬದುಕು ಮುಗಿದು ಹೋಗುತ್ತದೆ. ಆದರೆ ಅವನ ಚಿಂತನೆಗಳು ಉಳಿಯುತ್ತದೆ. ಇದು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದರು.ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ- ಸಿಎಂ ಡಿಕೆಶಿ

ಕತ್ತಿಗಿಂತ ಲೇಖನಿ ಹರಿತ ಎಂಬ ನಾಣ್ಣುಡಿಯಿದೆ. ಸುತ್ತೂರು ಶ್ರೀಗಳು ನೂರಾರು ಬರಹಗಾರರನ್ನು ಬೆಂಬಲಿಸಿದ್ದಾರೆ. ನಮ್ಮ ಸಂಸ್ಕೃತಿ ಕಾಪಾಡುವ ಕೆಲಸ ಮಾಡ್ತಿದ್ದಾರೆ. ವೀರಪ್ಪ ಮೊಯ್ಲಿ ನೂರಾರು ನಾಯಕರನ್ನು ತಯಾರು ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕೂಡ ಛಾಪನ್ನು ಮೂಡಿಸುವ ಕೆಲಸ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಹೋಗೋದು ಸುಲಭದ ಮಾತಲ್ಲ. ಒಬ್ಬ ರಾಜಕೀಯ ವ್ಯಕ್ತಿ ಅದನ್ನು ಮಾಡುತ್ತಿದ್ದಾರೆ. ಕೇಂದ್ರ ಸಚಿವರಾಗಿ, ಸಿಎಂ ಆಗಿ ಅನೇಕ ಕೊಡುಗೆಯನ್ನು ಕೊಟ್ಟಿದ್ದಾರೆ. ಮೊಯ್ಲಿ ಅವರಿಗೆ ಅವರಿಗೂ ಜ್ಞಾನಪೀಠ ಪ್ರಶಸ್ತಿ ಸಿಗಲಿ ಎಂದು ಶುಭಹಾರೈಸಿದರು.ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ವೀರಪ್ಪ ಮೊಯ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಲಿ- ಸಿಎಂ ಡಿಕೆಶಿ

ಹುಟ್ಟು ಸಾವಿನ ಮಧ್ಯೆ ಏನು ಸಾಧನೆ ಮಾಡುತ್ತೇವೆ ಅನ್ನೋದು ಮುಖ್ಯ. ರಾಜಕೀಯ ಮಧ್ಯೆದಲ್ಲಿ ಕಲೆ ಸಂಸ್ಕೃತಿ ಉಳಿಸುವ ಕೆಲಸ ಮಾಡ್ತಿದ್ದಾರೆ. ಮುಂದಿನ ವರ್ಷ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ನಿರ್ಧಾರ ಮಾಡಿದ್ದೇವೆ. ವೀರಪ್ಪ ಮೊಯ್ಲಿ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ಆಗತ್ತದೆ. 3 ದಿನ ಈ ಕಾರ್ಯಕ್ರಮ ನಡೆಯತ್ತದೆ. ಬಜೆಟ್ ನಲ್ಲಿ ನಾನು ಇದನ್ನು ಘೋಷಣೆ ಮಾಡುತ್ತೇನೆ ಎಂದರು.literature field jk02_new jk02 new

ಭಾರತದ ಸಂಸ್ಕೃತಿಯಲ್ಲಿ ಮಹಾಭಾರತ, ರಾಮಾಯಣ, ಕೃಷ್ಣನ ಕೊಳಲು ತನ್ನದೇ ಕಥೆಗಳನ್ನು ಹೊಂದಿದೆ. ವಿದ್ಯಾ ಸಾಹಿತ್ಯ ಸಂಸ್ಕೃತಿ ಎಲ್ಲವನ್ನು ನಾವು ಅರಿತುಕೊಳ್ಳಬೇಕು. ಹುಲ್ಲು ಕಡ್ಡಿ ಕೂಡ ಕೆಲಸಕ್ಕೆ ಬರತ್ತದೆ. ಧರ್ಮ ಯಾವುದಾದರೂ ತತ್ವ ಒಂದೇ. ದೇವನೊಬ್ಬ ನಾಮ ಹಲವು. ವೀರಪ್ಪ ಮೊಯ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರಿಗೆ ಇನ್ನಷ್ಟು ಶಕ್ತಿ ತುಂಬಬೇಕು. ಅವರ ಸೇವೆ ರಾಜ್ಯಕ್ಕೆ ಬೇಕು. ಎಲ್ಲರಿಗೂ ನನ್ನ ನಮನಗಳು ಎಂದು ಸಿಎಂ ಡಿಕೆಶಿ ನುಡಿದರು.

Veerappa Moily, literature field , Jnanpith Award, CM, DK Shivakumar

English Summary
Title

CM D.K. Shivakumar Wishes Jnanpith Award for Veteran Leader and Author M. Veerappa Moily

Short Description
Karnataka Chief Minister D.K. Shivakumar has expressed hope that veteran politician and acclaimed author M. Veerappa Moily will be honored with the prestigious Jnanpith Award for his remarkable contributions to literature. Speaking at the Mysuru release of the fourth volume of Moily’s seven-volume Kannada prose epic, Vishwa Samskrutiya Mahayana, Shivakumar praised the former Chief Minister's enduring literary legacy. Already a recipient of the Sahitya Akademi Award, Saraswati Samman, and Moortidevi Award, Moily continues to enrich Kannada literature alongside his distinguished career in public service.
Keywords
Veerappa Moily, literature field, Jnanpith Award, CM, DK Shivakumar