Thursday, October 1, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page ರಾಜ್ಯದಲ್ಲಿ ತೀವ್ರ ಬರ: ಜಲಾಶಯಗಳು ತುಂಬುವವರೆಗೆ ರೈತರು ಬೆಳೆ ಬೆಳೆಯಬೇಡಿ- ಸಿಎಂ ಡಿಕೆ ಶಿವಕುಮಾರ್

ರಾಜ್ಯದಲ್ಲಿ ತೀವ್ರ ಬರ: ಜಲಾಶಯಗಳು ತುಂಬುವವರೆಗೆ ರೈತರು ಬೆಳೆ ಬೆಳೆಯಬೇಡಿ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜುಲೈ,2,2026 (www.justkannda.in):  ರಾಜ್ಯದಲ್ಲಿ ತೀವ್ರ ಬರ ಇದೆ, ನೀರು ವಿದ್ಯುತ್ ಗೆ ಅಭಾವ ಇದೆ.  ಹೀಗಾಗಿ ರೈತರು ಮಳೆ ನೀರು ನಂಬಿಕೊಂಡು ಬೆಳೆ ಬೆಳೆಯಬೇಡಿ ಎಂದು ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ವಿದ್ಯುತ್ ಅಭಾವ ತಪ್ಪಿಸಲು ಪರ್ಯಾಯದತ್ತ ಗಮನಹರಿಸಬೇಕಿದೆ.  ಬರಪೀಡಿತ ಪ್ರದೇಶಗಳಿಗೆ ನಾನು ಭೇಟಿ ಕೊಡುತ್ತೇನೆ. ರಾಜ್ಯದ ಜಲಾಶಯಗಳಿಗೆ ಒಳಹರಿವು ಪ್ರಮಾಣ ಕಡಿಮೆ ಇದೆ. ನೀರಿಲ್ಲ ಹೀಗಾಗಿ  ರೈತರು ಮಳೆ ನೀರು ನಂಬಿಕೊಂಡು ಬೆಳೆ ಬೆಳೆಯಬೇಡಿ. ಜಲಾಶಯ ತುಂಬುವವರೆಗೆ ರೈತರು ಬೆಳೆ ಬೆಳೆಯಲು ಹೋಗಬೇಡಿ ಎಂದರು.

ಈ ಬಾರಿ ಇಡೀ ದೇಶದಲ್ಲಿಯೇ ಭೀಕರ ಬರಗಾಲ ಇದೆ. ಪ್ರಧಾನಿ ನರೇಂದ್ರ  ಮೋದಿ ಕೂಡ ಸೂಚನೆ ಕೊಟ್ಟಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ರಾಜ್ಯದಲ್ಲಿ ತೀವ್ರ ಬರ farmer

ವಿಬಿ ಜಿ ರಾಮ್ ಜಿ ಯೋಜನೆಗೆ 40% ರಾಜ್ಯದಿಂದ ಕೊಡಬೇಕು.  ರಾಜ್ಯದಿಂದ ಪ್ರತಿರೋಧವಿದೆ.  ಕೋರ್ಟ್ ಗೂ ಅರ್ಜಿ ಸಲ್ಲಿಸಿದ್ದೇವೆ ಆದರೂ ಯೋಜನೆ ಜಾರಿ ಮಾಡಲು ಮುಂದಾಗಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.ಜಲಾಶಯಗಳು ತುಂಬುವವರೆಗೆ ರೈತರು ಬೆಳೆ ಬೆಳೆಯಬೇಡಿ jk02_new jk02 new

Key words: Severe drought, Farmers, crops, CM, DK Shivakumar