Saturday, August 15, 2026

BDA Apartments

Home Front Page ಅನಂತ್ ಕುಮಾರ್ ಹೆಗಡೆ ವಿರುದ್ದ ಕ್ರಮ ಕೈಗೊಳ್ಳಲು ಸಿಎಂ, ಡಿಸಿಎಂ ನಿರ್ಧಾರ-ಸಚಿವ ಶಿವರಾಜ್ ತಂಗಡಗಿ.

ಅನಂತ್ ಕುಮಾರ್ ಹೆಗಡೆ ವಿರುದ್ದ ಕ್ರಮ ಕೈಗೊಳ್ಳಲು ಸಿಎಂ, ಡಿಸಿಎಂ ನಿರ್ಧಾರ-ಸಚಿವ ಶಿವರಾಜ್ ತಂಗಡಗಿ.

ಬೆಂಗಳೂರು, ಜನವರಿ,18,2024(www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ದ ಏಕವಚನ ಬಳಕೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ದ ಕಾಂಗ್ರೆಸ್ ನಾಯಕರಲ್ಲದೇ ಬಿಜೆಪಿ ಕೆಲ ಮುಖಂಡರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು  ಮಾತನಾಡಿರುವ ಸಚಿವ ಶಿವರಾಜ್ ತಂಗಡಗಿ, ಅನಂತ್ ಕುಮಾರ್ ಹೆಗಡೆ ಹುಚ್ಚ ಎಂದು ಬಿಜೆಪಿಯವರೇ ತಿಳಿದುಕೊಂಡಿದ್ದಾರೆ ಎಂದು ಈಗ ಸಾಬೀತಾಯಿತು. ಹೆಗಡೆ ಅವರ ಮಾತಿಗೆ ಬೆಲೆ ಕೊಡಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷರೇ ಹೇಳಿದ್ದಾರೆ.  ಅನಂತ್ ಕುಮಾರ್ ಹೆಗಡೆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.  ಆತ ಬಿಜೆಪಿಯಲ್ಲಿ ಹುಚ್ಚ. ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಲೇವಡಿ ಮಾಡಿದರು.

ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಿ ಇಲ್ಲದಿದ್ದರೇ ನಾವು ಕೊಡಿಸುತ್ತೇವೆ. ಹೆಗಡೆ ವಿರುದ್ದ ಕ್ರಮ ಕೈಗೊಳ್ಳಲು ಸಿಎಂ, ಡಿಸಿಎಂ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

Key words: CM-DCM-decision – action -against -Ananth Kumar Hegde-Minister-Shivraj Tangadagi.