ಯಾವುದೇ ಕ್ಷಣದಲ್ಲಿ ನಿಗಮಮಂಡಳಿ ಪಟ್ಟಿ ಪ್ರಕಟ-ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಜನವರಿ,18,2024(www.justkannada.in): ಯಾವುದೇ ಕ್ಷಣದಲ್ಲಾದರೂ ನಿಗಮಮಂಡಳಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಈ ಕುರಿತು ಮಾನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಯಾವುದೇ ಕ್ಷಣದಲ್ಲಿ ನಿಗಮ ಮಂಡಳಿ ಪಟ್ಟಿ ಪ್ರಕಟವಾಗಲಿದೆ. 36 ಶಾಸಕರು 39 ಕಾರ್ಯಕರ್ತರ ಪಟ್ಟಿ ಪ್ರಕಟ ಆಗುತ್ತೆ.  ಯಾವುದೇ ಸಮಯದಲ್ಲೂ ಪ್ರಕಟವಾಗಲಿದೆ ಎಂದರು.

ಇನ್ನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಸಚಿವರ ನಿರಾಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್,  ಪಕ್ಷ ಹೇಳಿದಂತೆ ಎಲ್ಲರೂ ಕೇಳಬೇಕು ಎಂದರು.

Key words: Corporation Board -list -published – any moment-DCM-DK Shivakumar