ಟ್ರಾನ್ಸ್‌ ಫಾರ್ಮರ್‌ ಬಳಿ ವಿದ್ಯುತ್ ತಗುಲಿ ಚಿಂದಿ ಆಯುವ ಬಾಲಕ ಸಾವು.

ಬೆಂಗಳೂರು,ಜನವರಿ,18,2024(www.justkannada.in):  ಗೌರಿಬಿದನೂರಿನ ಮಂಚೇನಹಳ್ಳಿ ಸಮೀಪದ ಟ್ರಾನ್ಸ್ ಫಾರ್ಮರ್‌ ಬಳಿ ಹಾಕಿರುವ ಗೈ ವೈರ್‌ ಎಳೆಯಲು ಹೋಗಿ ಆಕಸ್ಮಿಕ ವಿದ್ಯುತ್‌ ತಗಲಿ ಚಿಂದಿ ಆಯುವ ಬಾಲಕ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ನಾಗೇಂದ್ರ (8) ಮೃತಪಟ್ಟ ಬಾಲಕ.  ಆತ ಇಂದು ಬೆಳಗ್ಗೆ ಚಿಂದಿ ಆಯುವ ಸಂದರ್ಭದಲ್ಲಿ ಟ್ರಾನ್ಸ್‌ ಫಾರ್ಮರ್‌ ಗೆ ಹೊಂದಿಕೊಂಡಿರುವ ಚರಂಡಿ ಬಳಿ ಇರುವ ಗೈ ವೈರ್‌ ಅನ್ನು ಬಲವಾಗಿ ಎಳೆದಿದ್ದರಿಂದ ಗೈ ವೈರ್‌ ಎಲ್ ಟಿ ಕಿಟ್ ಗೆ ತಾಕಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಬಾಲಕ ನಾಗೇಂದ್ರ ಮೃತ ಪಟ್ಟಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು, ಎಲೆಕ್ಟ್ರಿಕಲ್‌ ಇನ್ಸ್ ಪೆಕ್ಟರ್‌ ಅವರ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಚಿಕ್ಕಾಬಳ್ಳಾಪುರ- ಗೌರಿಬಿದನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜೊತೆಗೆ ಟ್ರಾನ್ಸ್‌ ಫಾರ್ಮರ್‌ ಬಳಿವಿರುವ ಚರಂಡಿ ದುರಸ್ಥಿ ಕಾರ್ಯ ಕೂಡ ನಡೆಯುತ್ತಿದೆ. ಬಾಲಕ, ಚರಂಡಿ ಆಚೆ ಇರುವ ಗೈ ವೈರ್‌ ಅನ್ನು ಎಳೆದ ಪರಿಣಾಮ ಈ ಘಟನೆ ಸಂಭವಿಸಿದೆ. ಈ ಘಟನೆ ಬೆಸ್ಕಾಂ ನಿರ್ಲಕ್ಷ್ಯದಿಂದ ಸಂಭವಿಸಿರುವುದಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ENGLISH SUMMARY..

Ragpicker got electrocuted
Bengaluru:

Eight-year-old ragpicker got electrocuted on Thursday morning while he was trying to pull the guy rope installed to the transformer at Manchenahalli town of Gowribidanuru sub-division.

Deceased Nagendra got electrocuted while he pulled a guy wire of the transformer which was just adjacent to a drain. While he pulled the guy wire it has came in contact with LT circuit and got electrocuted. There is no fault of BESCOM in this case.

Senior officials of BESCOM have visited the spot and waiting for the report from the Electrical Inspectorate on the accident.

Near the accident spot, Chikkaballapura- Gowribidanuru National highway work is going on, along with drainage work is also taken up. The boy had tried to pull the guy wire installed to the transformer.

Key words: boy-dies- after-getting-electrocuted -bangalore