ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ- ಮಲ್ಲಿಕಾರ್ಜುನ ಖರ್ಗೆ

ಕಲಬುರುಗಿ,ಮೇ,1,2026 (www.justkannada.in): ರಾಜ್ಯದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಬದಲಾವಣೆಗೆ ಸಮಯ ನಿಗದಿಯಾಗದೇ ನಾನು ಹೇಗೆ ಹೇಳಲಿ . ಸಿಎಂ ಬದಲಾವಣೆ ಯಾಗುತ್ತೆ, ಬದಲಾವಣೆ ಆಗಲ್ಲ ಎಂದು ಹೇಗೆ ಹೇಳಲಿ. ಸಮಯ ನಿಗದಿಯದ ಮೇಲೆ ಏನು ನಿರ್ಧಾರ ಮಾಡಬೇಕೋ ಮಾಡುತ್ತೇವೆ . ಸುಮ್ಮನೆ ತಪ್ಪು ಸಂದೇಶವನ್ನು ಕೊಡಬೇಡಿ ಎಂದರು.

ಏನು ನಿರ್ಣಯ ತೆಗೆದುಕೊಂಡರೇ ಪಕ್ಷಕ್ಕೆ ಏನು ಪರಿಣಾಮ ಆಗುತ್ತೆ. ಈ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ. ಇದನ್ನು ಎಲ್ಲರೂ ಬೆಂಬಲಿಸಬೇಕು. ಸಿಎಂ ಬದಲಾವಣೆ ವಿಚಾರವಾಗಿ ನಾವೆಲ್ಲ ಸೇರಿ ತೀರ್ಮಾನ ಮಾಡುತ್ತೇವೆ.  ಪದೇ ಪದೇ ಸಿಎಂ ಬದಲಾವಣೆ ಅಂದ್ರೆ ನಾನು ಏನು ಹೇಳಲಿ ಎಂದು ಖರ್ಗೆ ನುಡಿದರು.

Key words: Date, not fixed, CM change, Mallikarjun Kharge