18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿಎಂ ಬಿಎಸ್ ವೈ ಸಾಂಕೇತಿಕ ಚಾಲನೆ…

ಬೆಂಗಳೂರು,ಮೇ,1,2021(www.justkannada.in):  ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಂಕೇತಿಕವಾಗಿ ಚಾಲನೆ ನೀಡಿದರು.jk

ಬೆಂಗಳೂರಿನ ಶಿವಾಜಿನಗರದ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ನೀಡುವ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ  ನೀಡಿದರು.

ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, 3.56 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶವಿದೆ. 45 ವರ್ಷ ಮೇಲ್ಟಟ್ಟವರಿಗೆ ಕೋವಿಡ್ ಲಸಿಕೆ ನೀಡುತ್ತಿದ್ದೇವೆ. ಕೊರೋನಾ ವಿರುದ್ಧ ಲಸಿಕೆಯೇ ನಮ್ಮ ಸುರಕ್ಷಾ ಕವಚವಾಗಿದೆ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಸೂಚನೆಗಳಂತೆ, ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಅರ್ಹರು ನೋಂದಣಿ ಮಾಡಿಸಿಕೊಂಡು, ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಿರಿ. ಸರ್ಕಾರದೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.CM BS yeddyurappa- symbolic- drive - covid vaccine -campaign - over 18 years of age.

1 ಲಕ್ಷ ಲಸಿಕೆ ಸಂಗ್ರಹ ನಮ್ಮಲ್ಲಿಯೇ ಇದ್ದು ರಾಜ್ಯಕ್ಕೆ 3 ಲಕ್ಷ ಲಸಿಕೆ ಬಂದಿದ್ದು, ಒಟ್ಟು 4 ಲಕ್ಷ ಲಸಿಕೆ ಸಂಗ್ರಹವಿದ್ದು, ಖಾಲಿಯಾಗುವವರೆಗೆ ಲಸಿಕೆ ನೀಡುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ENGLISH SUMMARY…

CM BSY launches COVID vaccination campaign for citizens above 18 years of age
Bengaluru, May 1, 2021 (www.justkannada.in): Chief Minister B.S. Yedyurappa today symbolically launched the COVID vaccination campaign for citizens above 18 years of age in Bengaluru.
The campaign was symbolically launched at the Vajpayee Medical College in Shivajinagar, Bengaluru.CM BS yeddyurappa- symbolic- drive - covid vaccine -campaign - over 18 years of age.
Speaking later he informed that the State Government has an aim to vaccinate 3.56 crore people in the state. Presently we are providing vaccination to all above 45 years of age. Vaccination is the only safety weapon against Coronavirus. It is being provided on a preference basis, as per the instructions of the Govt. of India. All eligible persons should register themselves and take the vaccination without fail and cooperate with the government in its fight against the pandemic, he said.
“We have a total storage of 4 lakh vaccine vials in-store as of now, including the 3 lakh that arrived today,” he informed.
Keywords: COVID vaccination/ drive/ campaign/ 4 lakh vials/ Vajpayee Medical College/ CM B.S. Yedyurappa/ launches vaccination drive/ 18 years above

Key words: CM BS yeddyurappa- symbolic- drive – covid vaccine -campaign – over 18 years of age.