ಶೀಘ್ರವೇ ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಆರಂಭಿಸಿಲು ಸಿದ್ಧ-ಸಿಎಂ ಬೊಮ್ಮಾಯಿ.

ಬೆಳಗಾವಿ,ಡಿಸೆಂಬರ್,29,2022(www.justkannada.in): ಕಳಸಾ-ಬಂಡೂರಿ ಯೋಜನೆ ಡಿಪಿಆರ್ ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಶೀಘ್ರವೇ ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಆರಂಭಿಸಿಲು ಸಿದ್ಧರಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉತ್ತರ ಕರ್ನಾಟಕ ಭಾಗದ ಬಹುದಿನಗಳ ಕನಸು ನನಸಾಗಿದೆ. ಶೀಘ್ರವೇ ಕಳಸಾ ಬಂಡೂರಿ ಕಾಮಗಾರಿ ಆರಂಭವಾಗಲಿದೆ. ಇದು ಉತ್ತರ ಕರ್ನಾಟಕ ಜನರಿಗೆ  ಪ್ರಧಾನಿ ಮೋದಿ ಅವರ ಕೊಡುಗೆಯಾಗಿದೆ. ಉತ್ತರ ಕರ್ನಾಟಕ ಜನರ ಪರವಾಗಿ ಪ್ರಧಾಬಿ ಮೋಧಿ, ಕೇಂದ್ರ ನೀರಾವರಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶೀಘ್ರವೇ ಯೋಜನೆ ಕಾಮಗಾರಿ ಆರಂಭಿಸಲು ಸಿದ್ಧ ಎಂದರು.

ಮಹಾದಾಯಿ ವಿಚಾರದಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ.  ನಾನು ನೀರಾವರಿ ಸಚಿವನಾಗುವ ಮುನ್ನ  ಕಾಮಗಾರಿ ಆರಂಭವಾಗಿತ್ತು.  ಆದ್ರೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಆರಂಭ ಆಗಿರಲಿಲ್ಲ. ನಾನು ಸಚಿವನಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಆರಂಭವಾಗಿತ್ತು. ಆದೇಶ ಬಂದ ತಕ್ಷಣವೇ ಟೆಂಡರ್ ಕರೆಯಲಾಗುವುದು. ಮಹಾದಾಯಿ ವಿಚಾರದಲ್ಲಿ 30ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: CM Bommai- ready – start -work – Kalasa-Banduri –project- soon