ಬೈಕ್ ಟ್ಯಾಕ್ಸಿ ಅನುಮತಿ ವಾಪಸ್ ಪಡೆಯುವಂತೆ ಆಗ್ರಹ: ಸರ್ಕಾರದ ವಿರುದ್ಧ ಆಟೋ ಚಾಲಕರಿಂದ ಪ್ರತಿಭಟನೆ.

ಬೆಂಗಳೂರು,ಡಿಸೆಂಬರ್,29,2022(www.justkannada.in):   ಬೈಕ್ ಟ್ಯಾಕ್ಸಿಗೆ ನೀಡಿರುವ  ಅನುಮತಿ ವಾಪಸ್ ಪಡೆಯುವಂತೆ ಆಗ್ರಹಿಸಿ ಆಟೋ ಚಾಲಕರು ಇಂದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಎಲೆಕ್ಟ್ರಿಕ್ ಬೈಕ್ ಗೆ ನೀಡಿದ ಅನುಮತಿ ವಾಪಸ್ ಪಡೆಯಿರಿ. ರ್ಯಾಪಿಡೋ ಬೈಕ್ ಟ್ಯಾಕ್ಸಿ ಆಪ್ ಬ್ಯಾನ್ ಮಾಡುವಂತೆ ಒತ್ತಾಯಿಸಿ  ಆಟೋ ಚಾಲಕರು ಫ್ರೀಡಂಪಾರ್ಕ್ ನಿಂದ  ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದರು.

ಈ ವೇಳೆ ಪೊಲೀಸರು ಫ್ರೀಡಂ ಪಾರ್ಕ್ ಗೇಟ್ ನಲ್ಲೇ ಪ್ರತಿಭಟನಾನಿರತ ಆಟೋ ಚಾಲಕರಿಗೆ ತಡೆಯೊಡ್ಡಿದರು. ಈ ವೇಳೆ ಪೊಲೀಸರು ಮತ್ತು ಆಟೋಚಾಲಕರ ನಡುವೆ ಜಟಾಪಟಿ ನಡೆದು, ಪೊಲೀಸರ ವಿರುದ್ಧ ಆಟೋ ಚಾಲಕರು ಧಿಕ್ಕಾರ ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದು ಬಸ್ ನಲ್ಲಿ ಕರೆದೊಯ್ಯಲು ಪೊಲೀಸರು ಮುಂದಾದರು.

Key words: Demand –withdraw- bike taxi –permit-Protest – auto drivers –against-Govt.