ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ: ಯಾರೇ ದಂಡೆತ್ತಿ ಬಂದರೂ ಏನು ಆಗಲ್ಲ- ಅಮಿತ್ ಶಾ ಪ್ರವಾಸಕ್ಕೆ ಶಾಸಕ ಅನ್ನದಾನಿ ಟಾಂಗ್.

ಬೆಳಗಾವಿ,ಡಿಸೆಂಬರ್,29,2022(www.justkannada.in): ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಮಂಡ್ಯ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು ಈ ಕುರಿತು ಜೆಡಿಎಸ್ ಶಾಸಕ ಅನ್ನದಾನಿ ಟಾಂಗ್ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅನ್ನದಾನಿ,  ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ.  ಯಾರೇ ದಂಡೆತ್ತಿ ಬಂದರೂ ಏನು ಆಗಲ್ಲ. ಮಂಡ್ಯ  ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮತ್ತು ಹೆಚ್.ಡಿ  ಕುಮಾರಸ್ವಾಮಿ ಅವರ ಭದ್ರಕೋಟೆ.  ಮಂಡ್ಯಕ್ಕೆ ಯೋಗಿಯನ್ನಾದರೂ ಕರೆತರಲಿ ಜೋಗಿಯನ್ನಾದರೂ ಕರೆತರಲಿ. ನಾವು ಮುಸ್ಲಿಂರು ಕ್ಷಿಶಿಯನ್ನರಲ್ಲ. ನಾವೂ ಕೂಡ ಹಿಂದೂಗಳು. ಅಮೇರಿಕದಲ್ಲಿ ಕೂಡ ಹಿಂದೂಗಳು ಕೂಡ ಇದ್ದಾರೆ. ಸಮಾಜದಲ್ಲಿ ಒಟ್ಟಾಗಿ ಇರುವ ಕೆಲಸ ಮಾಡಬೇಕು ಎಂದು ಹೇಳಿದರು.

ನಾಳೆ ಮಂಡ್ಯಗೆ ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ  ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Key words: JDS- stronghold – Mandya -district- MLA -Annadani