Sunday, October 18, 2026

Dasara Wishes

Happy Dasara
Home Front Page ಅಂಜನೇಯನಿಗೂ ಭಜರಂಗದಳಕ್ಕೂ ಏನ್ ಸಂಬಂಧ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್ ಗೆ ಸಿಎಂ ಬೊಮ್ಮಾಯಿ ತಿರುಗೇಟು..

ಅಂಜನೇಯನಿಗೂ ಭಜರಂಗದಳಕ್ಕೂ ಏನ್ ಸಂಬಂಧ ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್ ಗೆ ಸಿಎಂ ಬೊಮ್ಮಾಯಿ ತಿರುಗೇಟು..

ಹುಬ್ಬಳ್ಳಿ,ಮೇ,4,2023(www.justkannada.in): ಅಂಜನೇಯನಿಗೂ ಭಜರಂಗದಳಕ್ಕೂ ಏನ್ ಸಂಬಂಧ ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಮನಗೂ ಹನುಮನಿಗೂ ಯಾವ ರೀತಿ ಸಂಬಂಧ ಇದೆಯೋ  ಅದೇ ರೀತಿ ಹನುಮನಿಗೂ ಬಜರಂಗದಳಕ್ಕೂ ಸಂಬಂಧ ಇದೆ. ಇದನ್ನು ಕಾಂಗ್ರೆಸ್ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಜನರ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ.  ಕಾರ್ಯಕ್ರಮದ ಆಧಾರದಲ್ಲಿ ಚುನಾವಣೆ ಎದುರಿಸಿ. ಜಾತಿ ಧರ್ಮ ಕೋಮು ಭಾವನೆ ಕೆರಳಿಸೋದು ಸರಿಯಲ್ಲ . ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ತೋರಿಸುತ್ತೆ. ಕಾಂಗ್ರೆಸ್ ಎಸ್ಡಿಪಿಐ ಮತ್ತು ಪಿಎಫ್ ಐ ಕಪಿಮುಷ್ಠಿಯಲ್ಲಿದೆ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದರು.

Key words: CM Bommai- DK Shivakumar -relationship – Rama – Bajrang Dal.