ಜಗತ್ತು ಅಚ್ಚರಿ ಪಡುವಂತೆ ಯೋಜನೆ ರೂಪಿಸುತ್ತಿದ್ದೇನೆ – ಸಿಟಿ ರೌಂಡ್ಸ್ ವೇಳೆ  ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ.

ಬೆಂಗಳೂರು, ಸೆ.08, 2019 : ( www.justkannada.in news )  ಜಗತ್ತು ಅಚ್ಚರಿ ಪಡುವಂತೆ ಯೋಜನೆ ರೂಪಿಸುತ್ತಿದ್ದೇನೆ. ಜನರ ಸಮಸ್ಯೆ ತಿಳಿದು ತಕ್ಷಣ ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಹಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಇಂದು ಬೆಳಗ್ಗೆ ಬೆಂಗಳುರು ನಗರ ಪ್ರದಕ್ಷಿಣೆ ನಡೆಸಿದ ಸಿಎಂ, ಬಳಿಕ ಮಾಧ್ಯಮದ ಜತೆ ಮಾತನಾಡಿ ಹೇಳಿದಿಷ್ಟು…

ಇಲ್ಲಿನ ರಸ್ತೆ ಸ್ವಚ್ಚತೆ, ಸೇವೆ ,ಅಭಿವೃದ್ಧಿ ದೃಷ್ಟಿಯಿಂದ ನಗರ ಪರಿವೀಕ್ಷಣೆ ಮಾಡ್ತಿದ್ದೀನಿ. ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಾಸ್ತವಿಕ ಸ್ಥಿತಿ ತಿಳಿಯುವುದಕ್ಕೆ ಪ್ರತಿ 15 ದಿನಗಳಿಗೊಮ್ಮೆ ಭಾನುವಾರ  ಎರಡು ಗಂಟೆಗಳ ಕಾಲ ನಗರ ಪ್ರದಕ್ಷಿಣೆ ಮಾಡಲಿದ್ದೇನೆ. ಇದರಿಂದ ಸಾರ್ವಜನಿಕರಿಗೂ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಸಿಎಂ ಯಡಿಯೂರಪ್ಪ ಜತೆಗೆ ಡಿಸಿಎಂ 1 ಅಶ್ವಥ್ ನಾರಾಯಣ, ಸಚಿವ ಆರ್ ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಶಾಸಕ ಅರವಿಂದ ಲಿಂಬಾವಳಿ , ರವಿಸುಬ್ರಮಣ್ಯ, ಸತೀಶ್ ರೆಡ್ಡಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.

ಸಿಎಂ ಸಿ.ಟಿ ರೌಂಡ್ ವೇಳೆ ಝೀರೋ ಟ್ರಾಫಿಕ್ ವ್ಯವಸ್ಥೆ. ರಸ್ತೆ ವಿಸ್ತರಣೆ ಸಂಬಂಧ ಟಿಡಿಆರ್ ಪರಿಹಾರ ವಿತರಣೆ ವಿಳಂಬ. ಪರಿಹಾರ ವಿಳಂಬ ಬಗ್ಗೆ ಸಿಎಂಗೆ ಈ ರಸ್ತೆಯ ಆಸ್ತಿಗಳ ಮಾಲೀಕರಿಂದ ದೂರು. ಶೇ.25 ರಷ್ಟೇ ಪರಿಹಾರ ಕೊಡಲಾಗಿದೆ. ಉಳಿದ ಪರಿಹಾರ ಬೇಗ ಕೊಡಿಸಿ ಎಂದು ಮನವಿ.ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸಿಎಂ. ಬೇಗ ಪರಿಹಾರ ಸಮಸ್ಯೆ ಇತ್ಯರ್ಥ ಪಡಿಸಿ ಎಂದು ಸಿಎಂ ಸೂಚನೆ.

ಬನ್ನೇರುಘಟ್ಟ ರಸ್ತೆಯ ಐಐಎಂಬಿ ಬಳಿ ಬಸ್ಸಿಂದ ಇಳಿದ ಸಿಎಂ, ಮೆಟ್ರೋ ಕಾಮಗಾರಿ ವೀಕ್ಷಣೆ. ಈ ಮಾರ್ಗದಲ್ಲಿ ರಸ್ತೆ ವಿಸ್ತರಣೆ ಸಂಬಂಧ ಗೊಂದಲ‌. ಮೆಟ್ರೋ ಮಾರ್ಗ ನಿರ್ಮಾಣದಿಂದ ಸಮಸ್ಯೆ ಆಗ್ತಿದೆ ಎಂದು ಸ್ಥಳೀಯ ವರ್ತಕರಿಂದ ಸಿಎಂಗೆ ಮನವಿ. ಟ್ರಾಫಿಕ್ ನಿಂದ 30 ಸಾವಿರ ಕೋಟಿ ಲಾಸ್. ಔಟರ್ ರಿಂಗ್ ರೋಡ್ ಕಂಪನಿ ಅಸೋಸಿಯೇಷನ್ ನಿಂದ ಸಿಎಂಗೆ ದೂರು. ಔಟರ್ ರಿಂಗ್  ರೋಡ್ ಕಂಪನಿ ಅಸೋಸಿಯೇಷನ್ ಗಳ ಸಮಸ್ಯೆ ಆಲಿಸಿದ ಸಿಎಂ.

ಈ ವೇಳೆ ತಮ್ಮಗೆ ಆಗ್ತಿರೋ ಸಮಸ್ಯೆಗಳನ್ನ ಹೇಳಿಕೊಂಡ ಅಸೋಸಿಯೇಷನ್. ಹೆಬ್ಬಾಳ, ಸಿಲ್ಕ್ ಬೋರ್ಡ್, ಟಿನ್  ಫ್ಯಾಕ್ಟರಿ ಬಳಿ ಟ್ರಾಫಿಕ್ ಜಾಮ್. ಮೆಟ್ರೋ ಕಾಮಗಾರಿ ವಿಳಂಬದಿಂದ ಮೇನ್ ಅವರ್ ಲಾಸ್ ಆಗ್ತಿದೆ. ಕೆಲಸದ ಸಮಸ್ಯೆ ಟ್ರಾಫಿಕ್ ನಲ್ಲೆ ಕಳೆದು ಹೋಗ್ತಿದೆ. ಇದರಿಂದ ಔಟರ್ ರಿಂಗ್ ರೋಡ್ ನಲ್ಲಿರುವ ಕಂಪನಿಗಳಿಗೆ ವರ್ಷಕ್ಕೆ  30 ಸಾವಿರ ಕೋಟಿ ನಷ್ಟ ಆಗ್ತಿದೆ. ಸಿಎಂ ಎದುರು ಅಂಕಿ ಅಂಶ ಸಮೇತ ವರದಿ ನೀಡಿದ ಅಸೋಸಿಯೇಷನ್ ಸದಸ್ಯ ಆರ್ ಕೆ ಮಿಶ್ರಾ.

ಮೆಟ್ರೋ ಕಾಮಗಾರಿ, ನೆರೆಪೀಡತರಿಗೆ ಸಿಎಸ್ ಆರ್ ಫಂಡ್ ನೀಡುವಂತೆ ಸಿಎಂ ಮನವಿ. ಕಂಪನಿ ಅಸೋಸಿಯೇಷನ್ ವತಿಯಿಂದ ಸಿಎಸ್ ಆರ್ ಫಂಡ್ ನೀಡುವಂತೆ ಮನವಿ

key words : cm-b.s.yadiyurappa-bangalore-city.rounds