ಟಿಪ್ಪು ಸುಲ್ತಾನ್ ಸ್ಟೈಲ್ ನಲ್ಲಿ ಕುದುರೆ ಏರಿ ಬಂದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್….

ಬೆಂಗಳೂರು,ಸೆ,7,2019(www.justkannada.in): ಕಾರ್ಯಕ್ರಮವೊಂದಕ್ಕೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಟಿಪ್ಪು ಡ್ರೆಸ್ ಹಾಕಿಕೊಂಡು ಟಿಪ್ಪು ಸ್ಟೈಲ್ ನಲ್ಲಿ ಕುದುರೆ ಏರಿ ಬಂದ ಪ್ರಸಂಗ ನಡೆಯಿತು.

ನಿನ್ನೆ ಚಾಮರಾಜಪೇಟೆಯ ಟಿಪ್ಪು ನಗರದಲ್ಲಿ ಕೆ.ಆರ್ ಮಾರ್ಕೆಟ್ ವಾರ್ಡ್ ಪಾಲಿಕೆ‌ ಸದಸ್ಯೆ ನಸೀಮಾ ಆಯುಬ್ ಖಾನ್ ಆಯೋಜಿಸಿದ್ದ ಟೈಲರಿಂಗ್‌ ವಿತರಣೆಗಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಖಾನ್ ಟಿಪ್ಪು ಸುಲ್ತಾನ್ ಗೆಟಪ್ ನಲ್ಲಿ ಕುದುರೆ ಏರಿ ಬರುವ ಮೂಲಕ ಮಿಂಚಿದರು.

ನೂರಾರು ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನು ಚಾಮರಾಜಪೇಟೆ ಕ್ಷೇತದ ಕಾಂಗ್ರೆಸ್ ಶಾಸಕರಾಗಿರುವ ಜಮೀರ್ ಅಹಮ್ಮದ್ ಖಾನ್ 40 ಜನರಿಗೆ ಪ್ರತ್ಯೇಕವಾಗಿ 10 ಸಾವಿರ ಹಣ  ನೀಡಿದರು.

key words: Former Minister -Zameer Ahmad Khan-Tipu Sultan –style-horse-bangalore