ಹಿರಿಯ ವಕೀಲ ರಾಮ್ ಜೇಠ್ಮಲಾನಿ ಇನ್ನಿಲ್ಲ. ಸಂಜೆ ಅಂತ್ಯಸಂಸ್ಕಾರ.

 

ಹೊಸ ದಿಲ್ಲಿ, ಸೆ.08, 2019 : (www.justkannada.in news ) ಹಿರಿಯ ವಕೀಲ , ಕೇಂದ್ರದ ಮಾಜಿ ಸಚಿವ 96 ವರ್ಷದ ರಾಮ್ ಜೇಠ್ಮಲಾನಿ ಇಂದು ಬೆಳಗ್ಗೆ 7.45ಕ್ಕೆ ದಿಲ್ಲಿಯ ಸ್ವಗೃಹದಲ್ಲಿ ನಿಧನರಾದರು.

ಕೆಲ ದಿಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ರಾಮ್ ಜೇಠ್ಮಲಾನಿ ಭಾನುವಾರ ಇಹಲೋಕ ತ್ಯಜಿಸಿದರು. ಇಂದು ಸಂಜೆ ಲೋಧಿ ರಸ್ತೆಯ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಪುತ್ರ ಮಹೇಶ್ ಹೇಳಿದ್ದಾರೆ.

1996, 1999 ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಜೇಠ್ಮಲಾನಿ.
ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಕೀಲರಾಗಿದ್ದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಪರ ವಾದಿಸಿದ್ದರು
ಅಕ್ರಮ ಗಣಿಗಾರಿಕೆ ಪ್ರಕಣದಲ್ಲಿ ಬಿ.ಎಸ್. ಯಡಿಯೂರಪ್ಪ ಪರ ವಾದ ಮಾಡಿದ್ದರು.

key words : senior-advocate -ram-jethmalani-passed-away-at-delhi-today