‘RRR’ ಯೋಜನೆಯಡಿ ಸಂಗ್ರಹಿಸಲಾಗಿದ್ದ ಬಟ್ಟೆ, ಪುಸ್ತಕ  ದಿನಬಳಕೆ ಸಾಮಾಗ್ರಿಗಳು ವೃದ್ಧಾಶ್ರಮಗಳಿಗೆ ಹಸ್ತಾಂತರ.

ಮೈಸೂರು,ಆಗಸ್ಟ್,1,2023(www.justkannada.in): ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ 2.0  ಕಾರ್ಯಕ್ರಮದ ಅಂಗವಾಗಿ R-R-R(Reduce, Re-use, Re-cycle, ಯೋಜನೆಯಡಿ ಮೈಸೂರಿನ  ಶ್ರೀರಾಂಪುರ ಟೌನ್ ವ್ಯಾಪ್ತಿಯ ಎಲ್ಲಾ ಬಡಾವಣೆಗಳಿಂದ ಸಂಗ್ರಹಿಸಲಾಗಿದ್ದ  ವಿವಿಧ ಆಟಿಕೆ ಸಾಮಗ್ರಿಗಳು, ಬಟ್ಟೆಗಳು, ಪುಸ್ತಕಗಳು ಮತ್ತು  ದಿನಬಳಕೆಯ ಇತರೆ ಪದಾರ್ಥ/ಸಾಮಗ್ರಿಗಳನ್ನು ವೃದ್ಧಾಶ್ರಮಗಳಿಗೆ ಹಸ್ತಾಂತರಿಸಲಾಯಿತು.

ನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಶ್ರೀಧರ್ ಅವರ  ನೇತೃತ್ವದಲ್ಲಿ ಛಾಯಾದೇವಿ ಅನಾಥ ಆಶ್ರಮ, ಚಿಕ್ಕ ಅರದನಹಳ್ಳಿ, ಜಯನಗರ, ಮೈಸೂರು ಸಿಟಿ, ಪ್ರೀತಿ ವೃದ್ದಾಶ್ರಮ ಶ್ರೀರಾಂಪುರ ಟೌನ್ ಹಾಗೂ ಶ್ರೀ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಜೆಪಿ ನಗರ ಮೈಸೂರ್ ಸಿಟಿ, ಇಲ್ಲಿನ  ಸಂಸ್ಥೆಗಳಿಗೆ ಸಾಮಗ್ರಿಗಳು, ಬಟ್ಟೆಗಳು, ಪುಸ್ತಕಗಳು ಮತ್ತು  ದಿನಬಳಕೆಯ ವಸ್ತುಗಳನ್ನ  ಹಸ್ತಾಂತರಿಸಲಾಯಿತು.

ಶ್ರೀ ಮೂಕಾಂಬಿಕಾ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ,   ಮೈಸೂರು ವಿಶ್ವವಿದ್ಯಾನಿಲಯ ನೌಕರರ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಸಹಯೋಗದಲ್ಲಿ  ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸಮುದಾಯ ಸಂಘಟನಾಧಿಕಾರಿ ಶ್ರೀನಿವಾಸ್ , ಆರೋಗ್ಯ ಅಧಿಕಾರಿ ಪರಮೇಶ್ ಮೇಸ್ತ್ರಿ ಮುತ್ತು ಸ್ವಾಮಿ, ಕಚೇರಿಯ ಅಧಿಕಾರಿ, ನೌಕರರು ಸಿಬ್ಬಂದಿಗಳು, ಪೌರಾಕಾರ್ಮಿಕರು ಹಾಗೂ ಮೂಕಾಂಬಿಕ ಸಮೃದ್ದಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್, ಪ್ರಧಾನ ಕಾರ್ಯದರ್ಶಿ ಪುನೀತ್, ಕಾರ್ಯದರ್ಶಿ ನಾಗಭೂಷಣ ಆಚಾರ್, ಖಜಾಂಚಿ ನಾಗರಾಜ್ ಹಾಗೂ ಪದಾಧಿಕಾರಿಗಳು ಮತ್ತು ಅನಾಥಾಶ್ರಮ ಮತ್ತು ಹಾಸ್ಟೆಲ್ ಗಳ ಮುಖ್ಯಸ್ಥರು, ಕಾರ್ಯಕರ್ತರು, ಸ್ವಯಂಸೇವಕರು ಉಪಸ್ಥಿತರಿದ್ದರು.

Key words: Clothes-books – collected – RRR scheme – handed over – old age homes-mysore