242 ಹುದ್ದೆಗಳಿಗೆ ಅರ್ಜಿ ಹಾಕಿದ್ದು ಕೇವಲ 27 ಮಂದಿ.

ಮೈಸೂರು,ಮೇ,26,2021(www.justkannada.in): ಮೈಸೂರು ಜಿಲ್ಲಾ ಇಲಾಖೆ ವತಿಯಿಂದ ಸಿನಿಯರ್ ರೆಸಿಡೆನ್ಸಿ ಡಾಕ್ಟರ್, ಜೂನಿಯರ್ ರೆಸಿಡೆನ್ಸಿ ಡಾಕ್ಟರ್ ಸೇರಿ  242 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ 242 ಹುದ್ದೆಗಳಿಗೆ ಅರ್ಜಿ ಬಂದಿದ್ದು ಮಾತ್ರ 27.jk

ಹೌದು,  ಮೈಸೂರು ಜಿಲ್ಲಾ ಇಲಾಖೆ ವತಿಯಿಂದ 18 ಸಿನಿಯರ್ ರೆಸಿಡೆನ್ಸಿ ಡಾಕ್ಟರ್ ಹುದ್ದೆಗಳು. 14 ಸಿನಿಯರ್ ರೆಸಿಡೆನ್ಸಿ( ಪಲ್ಮನಾಲಜಿಸ್ಟ್), 22 ಸಿನಿಯರ್ ರೆಸಿಡೆನ್ಸಿ(ಅನಸ್ತೇಷಿಯ), 29 ಜೂನಿಯರ್ ರೆಸಿಡೆನ್ಸಿ ಡಾಕ್ಟರ್  ಹುದ್ದೆಗಳು. 159 ಸ್ಟಾಪ್ ನರ್ಸ್​ಗಳ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿತ್ತು. ಇದಕ್ಕೆ ಮೇ 24ರಂದು ಸಂದರ್ಶನ ಏರ್ಪಡಿಸಲಾಗಿತ್ತು.

ಆದರೆ 242 ಹುದ್ದೆಗಳ ಪೈಕಿ 27ಮಂದಿ ಮಾತ್ರ ಸಂದರ್ಶನಕ್ಕೆ ಬಂದಿದ್ದರು, ಈ 27 ಮಂದಿಗೆ ಮೈಸೂರು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ ಆವರಣದಲ್ಲಿ ಎಂಎಂಸಿ- ಆರ್ ಎ ಡೀನ್ ಡಾ. ಸಿ.ಪಿ.ನಂಜರಾಜ ನೇತೃತ್ವದಲ್ಲಿ ಸಂದರ್ಶನ  ನಡೆಯಿತು. ಕೇವಲ ಒಂದೇ ಗಂಟೆಯಲ್ಲಿ ಸಂದರ್ಶನ ಪ್ರಕ್ರಿಯೆ ಮುಕ್ತಾಯವಾಯಿತು.

Key words: mysore-242 post- only -27 have -applied.