ಸ್ವಾತಂತ್ರ ಹೋರಾಟಗಾರ  ಹೆಚ್.ಎಸ್ ದೊರೆಸ್ವಾಮಿ ನಿಧನಕ್ಕೆ ಸಿಎಂ ಬಿಎಸ್ ವೈ ಸಂತಾಪ.

ಬೆಂಗಳೂರು,ಮೇ,26,2021(www.justkannada.in): ಸ್ವಾತಂತ್ರ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಅವರ ನಿಧನಕ್ಕೆ  ಸಿಎಂ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.jk

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀವಾದಿ, ಪತ್ರಕರ್ತ, ಸಮಾಜ ಸೇವಕರು, ನಾಡುನುಡಿ ಜನಪರ ಕಾಳಜಿಗಳಿಗೆ ಸದಾ ಧ್ವನಿಯಾಗಿದ್ದ ಶತಾಯುಷಿ ಹೆಚ್.ಎಸ್.ದೊರೆಸ್ವಾಮಿ ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದೇವರು ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

ಎಚ್.ಎಸ್.ದೊರೆಸ್ವಾಮಿ ಅವರು 1918 ಏಪ್ರಿಲ್ 10 ರಂದು ಹಾರೋಹಳ್ಳಿಯಲ್ಲಿ ಜನಿಸಿದ್ದರು.  ಕ್ವಿಟ್ ಇಂಡಿಯಾ ಚಳುವಳಿ ಸೇರಿ ಹಲವು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಭೂಕಬಳಿಕೆ ವಿರುದ್ದವೂ ಹೋರಾಟ ನಡೆಸಿದ್ದರು.

ENGLISH SUMMARY…

CM BSY condoles demise of freedom fighter H.S. Doreswamy
Bengaluru, May 26, 2021 (www.justkannada.in): Chief Minister B.S. Yeddyurappa has expressed his grief over the death of freedom fighter, centenarian H.S. Doreswamy.
H.S. Doreswamy expired today at the Jayadeva Hospital in Bengaluru. He had recently recovered from COVID-19 and had returned home. However, he died of a heart attack.
The Chief Minister in his tweet mentioned that he was a senior freedom fighter, Gandhian, journalist, social worker, and a person who fought for the welfare of the state and the people. “It is very sad to know he is no more. I pray the almighty to give strength to all his family members and well-wishers to bear the pain.”
H.S. Doreswamy was born on April 10, 1918, at Harohalli. He participated in several freedom struggles including the Quit India movement. He also had raised his voice against the land encroachment case.
Keywords: Freedom fighter/ H.S. Doreswamy no more/ CM BSY condoles

Key words:  CM –BS Yeddyurappa- condoles – death – freedom fighter -HS Doreswamy.