ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟನೆ: ಉಪಚುನಾವಣೆ ಬಳಿಕ ಎಲ್ಲವೂ ಬದಲಾವಣೆಯಾಗುವುದು ನಿಶ್ಚಿತ ಎಂದ ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು,ಅಕ್ಟೋಬರ್,30,2020(www.justkannada.in):  ಉಪಚುನಾವಣೆ ಬಳಿಕ ನಾನು ದೆಹಲಿಗೆ ಹೋಗುತ್ತೇನೆ. ದೆಹಲಿಗೆ ಹೋಗಿ ಬಂದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.jk-logo-justkannada-logo

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಉಪಚುನಾವಣೆ ಬಳಿಕ ಎಲ್ಲವೂ ಬದಲಾವಣೆಯಾಗುವುದು ನಿಶ್ಚಿತ. ಉಪಚುನಾವಣೆಯಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆಲುವು ಸಾಧಿಸುತ್ತದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಮುಖಭಂಗವಾಗುತ್ತದೆ ಎಂದರು.

ನಾನು ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ಯಾರ ಬಗ್ಗೆಯೂ ಒಂದೇ ಒಂದು ಶಬ್ದ ಬಳಸಿಲ್ಲ, ಯಾರ ಹೆಸರು ಬಳಸಿಲ್ಲ. ಉಪಚುನಾವಣೆ ಬಳಿಕ ದೆಹಲಿ ಹೋಗಿ ಬಂದಿ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.clarify-cabinet-expansion-cm-bs-yeddyurappa-says-everything-by-election

ಇನ್ನು ಉಪಚುನಾವಣೆಯಲ್ಲಿ ನಾನು ಪ್ರಚಾರ ಮಾಡಬೇಕು ಎಂಬುದಿಲ್ಲ. ಆದರೇ ಹೆಚ್ ಡಿ ದೇವೇಗೌಡರು, ಸಿದ್ದರಾಯ್ಯ, ಹೆಚ್.ಡಿ ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಹೋಗಿದ್ದಾರೆ. ನಾನು ಸಿಎಂ ಆಗಿ ಹೋಗದಿದ್ದರೇ ತಪ್ಪಾಗುತ್ತದೆ. ಹೀಗಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದೇನೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: Clarify -Cabinet expansion-CM BS Yeddyurappa -says -everything – by-election