ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡುತ್ತಿರುವುದಕ್ಕೆ ಕಾರಣ ಕೊಟ್ಟ ನಟ ದರ್ಶನ್..

ಬೆಂಗಳೂರು,ಅಕ್ಟೋಬರ್,30,2020(www.justkannada.in):  ನಾನು ಯಾವುದೇ ಪಕ್ಷ ನೋಡಿ ಪ್ರಚಾರಕ್ಕೆ ಬಂದಿಲ್ಲ. ವ್ಯಕ್ತಿ ನೋಡಿ ಮುನಿರತ್ನ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ. ಮುನಿರತ್ನ ಅವರು ಕರೆದೆಲ್ಲೆಡೆಗೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದ್ದಾರೆ.jk-logo-justkannada-logo

ಆರ್.ಆರ್ ನಗರದಲ್ಲಿ ಇಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ. ಪ್ರಚಾರಕ್ಕೂ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಮಾತನಾಡಿರುವ ನಟ ದರ್ಶನ್, ಮುನಿರತ್ನ ಅವರು ಕೊರೋನಾ ಸಮಯದಲ್ಲಿ ಅನ್ನ ದಾಸೋಹ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ಅಕ್ಕಿ ಕೊಟ್ಟಿದ್ದು ದೊಡ್ಡದನ. ಆ ದೊಡ್ಡತನದಿಂದಲೇ ಅವರ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.

ಮುನಿರತ್ನ ಕ್ಷೇತ್ರದ ಜನರಿಗೆ ನೆರವು ನೀಡಿದ್ದಾರೆ. ಮಾನವೀಯ ದೃಷ್ಠಿ ಇಟ್ಟುಕೊಂಡು ಪ್ರಚಾರಕ್ಕೆ ಹೋಗುತ್ತಿದ್ದೇನೆ. ಹೀಗಾಗಿ ಯಾವುದೇ ಪಕ್ಷ ನೋಡಿ ಪ್ರಚಾರ ಮಾಡುತ್ತಿಲ್ಲ ಎಂದು ತಾವು ಮುನಿರತ್ನ ಅವರ ಪ್ರಚಾರ ಮಾಡುವುದಕ್ಕೆ ಈ ರೀತಿ ನಟ ದರ್ಶನ್ ಕಾರಣ ನೀಡಿದ್ದಾರೆ.rr-nagar-by-election-reason-bjp-candidate-muniratna-campaign-actor-darshan

ದರ್ಶನ್ ಯಶವಂತಪುರದಿಂದ ರೋಡ್ ಶೋ ಆರಂಭಿಸಲಿದ್ದು ಅಭಿಮಾನಿಗಳು ನಟ ದರ್ಶನ್ ಗಾಗಿ  ಕಾದು ಕುಳಿತಿದ್ದಾರೆ.

Key words: RR Nagar-by election- reason -BJP candidate –Muniratna- campaign-actor- Darshan