ಮಾತಿಗೆ ಮಾತು ಬೆಳೆದು ಜಗಳ : ರೌಡಿ ಶೀಟರ್ ನಿಂದ ವೃದ್ಧನ ಬರ್ಬರ ಹತ್ಯೆ

ಮಂಡ್ಯ,ಅಕ್ಟೋಬರ್,30,2020(www.justkannada.in) : ಜಿಲ್ಲೆಯ ಬೇವುಕಲ್ಲು ಗ್ರಾಮದಲ್ಲಿ ಮಗಳ ಅಕ್ರಮ ಸಂಬಂಧದ ವಿಚಾರವಾಗಿ ರೌಡಿ ಶೀಟರ್ ಜೊತೆ ಜಗಳಕ್ಕಿಳಿದ್ದಿದ್ದ ವೃದ್ಧನನ್ನು ಬರ್ಬರವಾಗಿ ಹತ್ಯೆಮಾಡಲಾಗಿದೆ.jk-logo-justkannada-logo70 ವರ್ಷದ ವೃದ್ಧನನ್ನು ರೌಡಿ ಶೀಟರ್ ಚಾಕುವಿನಿಂದ ಮೂರು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದು, ಮೃತ ವೃದ್ಧನ ಮಗಳು ತಲೆ ಮರೆಸಿಕೊಂಡಿದ್ದಾಳೆ.

ಮಗಳು ಕಲಾ ಜತೆ ಮೋಹನ್​ ಅನೈತಿಕ ಸಂಬಂಧ

ಚೆನ್ನವೀರಯ್ಯ ಕೊಲೆಯಾದ ವೃದ್ಧನಾಗಿದ್ದು, ಅದೇ ಗ್ರಾಮದ ರೌಡಿ ಶೀಟರ್ ಮೋಹನ ಚಾಕುವಿನಿಂದ ಮೂರು ಬಾರಿ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೊಲೆಯಾದ ಚೆನ್ನವೀರಯ್ಯ ಮಗ, ಮಗಳು ಹಾಗೂ ಅಳಿಯನ ಜತೆಗೆ ವಾಸವಿದ್ದರು. ಚೆನ್ನವೀರಯ್ಯನ ಮಗಳು ಕಲಾ ಜತೆ ಮೋಹನ್​ ಅನೈತಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಅದೇ ವಿಚಾರವಾಗಿ ಚೆನ್ನವೀರಯ್ಯ ಹಾಗೂ ಮೋಹನ್ ಜತೆ ಆಗಾಗ ಜಗಳವಾಗುತ್ತಿತ್ತು.

ಮಾತಿಗೆ ಮಾತು ಬೆಳೆದು ಜಗಳ ಆರಂಭ, ಕೊಲೆಯಲ್ಲಿ ಅಂತ್ಯ 

ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ಮೋಹನ್ ತಾಯಿ ಸರೋಜ ಹಾಗೂ ಚೆನ್ನವೀರಯ್ಯ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿದೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ರೌಡಿಶೀಟರ್ ಮೋಹನ ಚಾಕುವಿನಿಂದ ಇರಿದು ಚೆನ್ನವೀರಯ್ಯನ್ನು ಹತ್ಯೆ ಮಾಡಿದ್ದಾನೆ.

Quarrel,Murder,old,man,rowdy,sheeter

ಮಂಡ್ಯ ಎಸ್ ಪಿ ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

key words : Quarrel-Murder-old-man-rowdy-sheeter